ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೊನ್ನೆ 11 ಸಾವಿರ ಎಕರೆ ವಕ್ಫ್ ಜಾಗ ಇದೆ ಎಂದಿದ್ದರು. ಈಗ ಇದು 15 ಸಾವಿರ ಎಕರೆಗೆ ಏರಿಕೆಯಾಗಿದೆ. ಹೀಗೆ ಬಿಟ್ಟರೆ ದೇವಸ್ಥಾನ, ವಿಧಾನಸೌಧ ನಮ್ಮದು ಎನ್ನುತ್ತಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.
ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಜಮೀರ್ ಅಹ್ಮದ್, ಎಂ.ಬಿ ಪಾಟೀಲ್ ರೈತರ ಪಹಣಿಯಲ್ಲಿ ವಕ್ಫ್ ಹೆಸರಿನಲ್ಲಿ ಕೋಮುಗಲಭೆ ಎಬ್ಬಿಸಲು ಈ ರೀತಿ ಮಾಡುತ್ತಿದ್ದಾರೆ. ವಕ್ಫ್ ದೇಶದಲ್ಲಿ ಹೊಸ ಪಾಕಿಸ್ತಾನವನ್ನು ರಚಿಸುವ ಗುರಿಯನ್ನು ಹೊಂದಿದೆ. ದೇಶದಲ್ಲಿ ಎಲ್ಲವೂ ವಕ್ಫ್‌ಗೆ ಸೇರಿದ್ದು ಎನ್ನುತ್ತಾರೆ. ಹಾಗಾದರೆ ಹಿಂದೂಗಳು ಎಲ್ಲಿಗೆ ಹೋಗಬೇಕು?
ಹೊನವಾಡದಲ್ಲಿ 1200 ಎಕರೆ ವಕ್ಫ್ ಬೋರ್ಡ್‌ಗೆ ಸೇರ್ಪಡೆಯಾಗಿದೆ. ಇವರು ಕೇವಲ 11 ಎಕರೆ ಎನ್ನುತ್ತಾರೆ. ಯಾಕೆ ಸುಳ್ಳು ಹೇಳುತ್ತಿದ್ದೀರಾ? ಅಲ್ಪಸಂಖ್ಯಾತರ ಮತ ಓಲೈಕೆ ಮಾಡಲು ಈ ರೀತಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.