ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆ ಚುನಾವಣೆ ಫಲಿತಾಂಶ ಹೊರಬೀಳುವ ಮುನ್ನವೇ ಜನರ ಜೇಬಿಗೆ ಕತ್ತರಿ ಬಿದ್ದಿದೆ. ಅಮುಲ್ ಹಾಲಿನ ಬೆಲೆ ಹೆಚ್ಚಾಗಿದೆ.
ಅಮುಲ್ ಗೋಲ್ಡ್, ಅಮುಲ್ ಶಕ್ತಿ, ಅಮುಲ್ ಟೀ ಸ್ಪೆಷಲ್ ಬೆಲೆ ಏರಿಕೆ. ಲೀಟರ್‌ಗೆ 2 ರೂ. ಹೆಚ್ಚಳವಾಗಿದೆ. ಅಮುಲ್ ಹಾಲಿನ ಹೊಸ ದರ ಇಂದು ಬೆಳಗ್ಗೆಯಿಂದಲೇ ಜಾರಿಗೆ ಬರಲಿದೆ.
ಒಟ್ಟಾರೆ ನಿರ್ವಹಣಾ ವೆಚ್ಚ ಮತ್ತು ಹಾಲು ಉತ್ಪಾದನಾ ವೆಚ್ಚದ ಹೆಚ್ಚಳವನ್ನು ಪ್ರತಿಬಿಂಬಿಸಲು ಇಂದಿನಿಂದ ಬೆಲೆ ಪರಿಷ್ಕರಣೆ ಜಾರಿಗೊಳಿಸಲಾಗಿದೆ. ಇದರ ಆಧಾರದ ಮೇಲೆ, ದೇಶದ ಎಲ್ಲಾ ಮಾರುಕಟ್ಟೆಗಳಲ್ಲಿ ಶುದ್ಧ ಅಮುಲ್ ಪ್ಯಾಕ್ ಹಾಲಿನ ಬೆಲೆ ಲೀಟರ್‌ಗೆ 2 ರೂ. ಏರಿಕೆಯಾಗಲಿದೆ ಎಂದು ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ ತಿಳಿಸಿದೆ.