ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಶಕ್ತಿಯೋಜನೆ ಜಾರಿಯಾದಾಗಿನಿಂದ ಆಟೋ ಚಾಲಕರು ಕಣ್ಣೀರಿಡೋದು ಕಡಿಮೆಯಾಗಿಲ್ಲ. ಹೆಣ್ಣುಮಕ್ಕಳೇ ಆಟೋದಲ್ಲಿ ಹೆಚ್ಚು ಓಡಾಟ ಮಾಡ್ತಿದ್ರು ಶಕ್ತಿ ಯೋಜನೆಯಿಂದಾಗಿ ಅವರು ಆಟೋ ಕಡೆ ಮುಖವನ್ನೇ ಮಾಡ್ತಿಲ್ಲ ಎಂದು ಸಾಕಷ್ಟು ಬಾರಿ ಆಟೋ ಚಾಲಕರು ಬೇಸರ ವ್ಯಕ್ತಪಡಿಸಿದ್ದಾರೆ.
ಅಂತೆಯೇ ಬೆಂಗಳೂರಿನಲ್ಲಿ ಆಟೋ ಚಾಲಕರೊಬ್ಬರು ಐದು ಗಂಟೆಗಳಿಂದ ಡ್ಯೂಟಿ ಮಾಡ್ತಿದ್ದೇನೆ ಬರೀ 40 ರೂಪಾಯಿ ದುಡಿದಿದ್ದೇನೆ ಎಂದು ಕಣ್ಣೀರಿಟ್ಟಿದ್ದಾರೆ. ಶಕ್ತಿ ಯೋಜನೆ ಜಾರಿಗೂ ಮುನ್ನ 500 ರೂಪಾಯಿವರೆಗೂ ದುಡಿಮೆ ಆಗುತ್ತಿತ್ತು. ಇದೀಗ ಬರೀ 40 ರೂಪಾಯಿ ದುಡಿಮೆ ಆಗಿದೆ, ಹೀಗೆ ಆದ್ರೆ ನಾವು ಮನೆ ಸಾಗಿಸೋದು ಹೇಗೆ ಎಂದು ಹೇಳಿದ್ದಾರೆ.