ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಬೆಳಗಿನ ಜಾವ ಅಫ್ಘಾನಿಸ್ತಾನದಲ್ಲಿ 4 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ತಿಳಿಸಿದೆ.
01:47 ಕ್ಕೆ ಕಂಪನ ಸಂಭವಿಸಿದೆ ಎನ್ನಲಾಗಿದ್ದು, ಇದರ ಕೇಂದ್ರಬಿಂದು 36.56°N ಅಕ್ಷಾಂಶ ಮತ್ತು 70.99°E ರೇಖಾಂಶದಲ್ಲಿ, 120 ಕಿಲೋಮೀಟರ್ ಆಳದಲ್ಲಿದೆ.
ಇಲ್ಲಿಯವರೆಗೂ ಯಾವುದೇ ಸಾವು-ನೋವುಗಳ ವರದಿಯಾಗಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.