ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಪಾನ್‌ನ ಹೊಕ್ಕೈಡೋದಲ್ಲಿ ಇಂದು 6.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ದೇಶದ ಹವಾಮಾನ ಸಂಸ್ಥೆ ತಿಳಿಸಿದೆ.
ಭೂಮಿಯಿಂದ 20 ಕಿ.ಮೀ ಆಳದಲ್ಲಿ ಸಂಭವಿಸಿದೆ ಎನ್ನಲಾಗಿದೆ. ಭೂಕಂಪದ ಕೇಂದ್ರಬಿಂದು ಹೊಕ್ಕೈಡೋದ ಪೂರ್ವ ಕರಾವಳಿಯಲ್ಲಿತ್ತು ಎಂದು ತಿಳಿಸಿದೆ. ಸದ್ಯ ಭೂಕಂಪದಿಂದ ಯಾವುದೇ ಹಾನಿಯಾದ ಬಗ್ಗೆ ವರದಿ ಬಂದಿಲ್ಲ.