ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಜಯನಗರದಲ್ಲಿ ಇಂದು ಬೆಳಗ್ಗೆ ಮತ್ತೆ ಭೂಕಂಪನವಾಗಿದ್ದು, ಜನ ಆತಂಕದಲ್ಲಿದ್ದಾರೆ.
ರಾಷ್ಟ್ರೀಯ ಭೂಕಂಪನ ಶಾಸ್ತ್ರ ಕೇಂದ್ರದ ಪ್ರಕಾರ ಭೂಕಂಪನದ ತೀವ್ರತೆ 3.1ರಷ್ಟಿದೆ. ಭೂಕಂಪದಿಂದಾಗಿ ಯಾವುದೇ ಹಾನಿ ಆಗಿಲ್ಲ. ಭೂಮಿ ನಡುಗಿದಂತೆ ಜನ ಭಯಬಿದ್ದು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.
ಇತ್ತೀಚೆಗೆ ವಿಜಯನಗರ ಹಾಗೂ ಕಲಬುರಗಿ ಸುತ್ತಾಮುತ್ತ ಭೂಮಿ ಕಂಪಿಸುತ್ತಿರುವ ಅನುಭವ ಆಗುತ್ತಿದೆ. ಈ ಭೂಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ ಐದನ್ನು ಮೀರಿ ಹೋಗಿಲ್ಲ.