ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನ ಮತ್ತು ಇಂಡೋನೇಷ್ಯಾದಲ್ಲಿ ಶುಕ್ರವಾರ ಸಂಭವಿಸಿದ ಭೂಕಂಪ ಎರಡೂ ದೇಶಗಳ ಜನರನ್ನು ನಡುಗುವಂತೆ ಮಾಡಿದೆ. ಇಂಡೋನೇಷ್ಯಾದಲ್ಲಿ ಸಂಭವಿಸಿದ ಭೂಕಂಪ ಶುಕ್ರವಾರ ರಿಕ್ಟರ್ ಮಾಪಕದಲ್ಲಿ 5.6 ತೀವ್ರತೆ ದಾಖಲಾಗಿದೆ. ದೇಶದ ಹವಾಮಾನ ಮತ್ತು ಭೂ ಭೌತಶಾಸ್ತ್ರ ಸಂಸ್ಥೆ ಪ್ರಕಾರ ಇದು ಭೂಕಂಪಗಳ ತವರಾಗಿದೆ. ತನಿಂಬರ್ ದ್ವೀಪಗಳ ವಾಯುವ್ಯಕ್ಕೆ 207 ಕಿಲೋಮೀಟರ್ ದೂರದಲ್ಲಿ ಸಮುದ್ರದ ತಳದಲ್ಲಿ ಸಂಭವಿಸಿದೆ.
ಇಂಡೋನೇಷ್ಯಾ ಭೂಕಂಪದಿಂದ ಸುನಾಮಿ ಭೀತಿ ಇಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಪಾಕಿಸ್ತಾನದಲ್ಲೂ ಕೂಡ ಶುಕ್ರವಾರ ಭೂಕಂಪ ಸಂಭವಿಸಿದ್ದು, ತೀವ್ರತೆ ರಿಕ್ಟರ್ ಮಾಪಕದಲ್ಲಿ 4.3 ಆಗಿತ್ತು. 170 ಕಿಮೀ ಆಳದಲ್ಲಿ ಭೂಕಂಪ ಸಂಭವಿಸಿದೆ. ಈ ಭೂಕಂಪದಿಂದಾಗಿ ಮನೆಗಳಲ್ಲಿ ಮಲಗಿದ್ದ ಜನರು ಭಯಭೀತರಾಗಿ ಹೊರ ಓಡಿ ಬಂದಿದ್ದಾರೆ. ನಿದ್ದೆಯಿಲ್ಲದೆ ಜನ ಜೀವ ಭಯದಲ್ಲಿ ಬೀದಿಗಳಲ್ಲಿ ಕಾಲ ಕಳೆಯುವಂತಾಯ್ತು.