ಪಾಕಿಸ್ತಾನದಲ್ಲಿ ಮತ್ತೆ ಕಂಪಿಸಿದ ಭೂಮಿ: ಹಲವು ಭಾಗಗಳಲ್ಲಿ 5.9 ತೀವ್ರತೆಯ ಭೂಕಂಪನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನದ ಹಲವು ಭಾಗಗಳಲ್ಲಿ ಇಂದು 5.9 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ವರದಿಯಾಗಿದೆ.

ಈ ಭೂಕಂಪ ಆಫ್ಘಾನಿಸ್ತಾನ-ತಜಿಕಿಸ್ತಾನ ಗಡಿಪ್ರದೇಶದಲ್ಲಿ, 94 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ. ಈ ಭೂಕಂಪದ ಕಂಪನಗಳು ಇಸ್ಲಾಮಾಬಾದ್, ಲಾಹೋರ್, ರಾವಲ್ಪಿಂಡಿ, ಪೆಶಾವರ್ ಸೇರಿದಂತೆ ಕೈಬರ್ ಪಖ್ತುಂಖ್ವಾ, ಪಂಜಾಬ್ ಮತ್ತು ಆಜಾದ್ ಕಾಶ್ಮೀರದ 20ಕ್ಕೂ ಹೆಚ್ಚು ನಗರಗಳಲ್ಲಿ ನಡೆದಿದೆ.

ವರದಿಗಳ ಪ್ರಕಾರ ಯಾವುದೇ ಜೀವಹಾನಿ ಅಥವಾ ಆಸ್ತಿಪಾಸ್ತಿಯ ಹಾನಿಯಾಗಿಲ್ಲ ಎನ್ನಲಾಗಿದೆ. ಈ ಭೂಕಂಪದ ಕಂಪನಗಳು ತುಂಬಾ ತೀವ್ರವಾಗಿದ್ದವು, ಇದರಿಂದಾಗಿ ಜನರು ಭಯಭೀತರಾಗಿ ಮನೆಗಳು, ಕಚೇರಿಗಳಿಂದ ಹೊರಗೆ ಓಡಿದ್ದಾರೆ.

ಇತ್ತೀಚೆಗಷ್ಟೇ ಏಪ್ರಿಲ್ 12 ರಂದು 5.5 ತೀವ್ರತೆಯ ಮತ್ತು ಏಪ್ರಿಲ್ 16 ರಂದು 5.3 ತೀವ್ರತೆಯ ಭೂಕಂಪಗಳು ಸಂಭವಿಸಿದ್ದವು, ಆದರೆ ಇವುಗಳಿಂದಲೂ ಯಾವುದೇ ಗಮನಾರ್ಹ ಹಾನಿಯಾಗಿರಲಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!