ಐರ್ಲೆಂಡ್‌ನ ಟೊಂಗಾದಲ್ಲಿ 7.2 ತೀವ್ರತೆಯ ಭೂಕಂಪ: ಸುನಾಮಿ ಭೀತಿ ಇಲ್ಲ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಶುಕ್ರವಾರ ರಾತ್ರಿ ದಕ್ಷಿಣ ಪೆಸಿಫಿಕ್ ಸಾಗರದ ಟೊಂಗಾ ಬಳಿ ಭಾರಿ ಭೂಕಂಪ ಸಂಭವಿಸಿದೆ. ಈ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 7.2 ರಷ್ಟಿತ್ತು ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ. ಭೂಕಂಪದ ಕೇಂದ್ರಬಿಂದು ಟೊಂಗಾದಿಂದ ನೈಋತ್ಯಕ್ಕೆ 280 ಕಿಲೋಮೀಟರ್ ದೂರದಲ್ಲಿ 104 ಮೈಲಿ ಆಳದಲ್ಲಿದೆ. ಈ ಭಾರಿ ಭೂಕಂಪದಿಂದಾಗಿ ಅಮೆರಿಕಕ್ಕೆ ಸುನಾಮಿ ಅಪಾಯವಿಲ್ಲ ಎಂದು ಸುನಾಮಿ ಎಚ್ಚರಿಕೆ ವ್ಯವಸ್ಥೆ ಹೇಳಿದೆ.

ಭೂಕಂಪದ ನಂತರ, ಪಶ್ಚಿಮ ಕರಾವಳಿ, ಬ್ರಿಟಿಷ್ ಕೊಲಂಬಿಯಾ ಮತ್ತು ಅಲಾಸ್ಕಾಕ್ಕೆ ಸುನಾಮಿ ಅಪಾಯವಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಆಸ್ಟ್ರೇಲಿಯನ್ ಹವಾಮಾನ ಇಲಾಖೆಯು ಈ ಭೂಕಂಪದಿಂದಾಗಿ ಆಸ್ಟ್ರೇಲಿಯಾಕ್ಕೆ ಸುನಾಮಿ ಅಪಾಯವಿಲ್ಲ ಎಂದು ಹೇಳಿದೆ. ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನ ಕೇಂದ್ರವು ಭೂಕಂಪದ ಬಗ್ಗೆ ಮೊದಲು ವರದಿ ಮಾಡಿದೆ. ಫಿಜಿ ದ್ವೀಪಗಳಲ್ಲಿ 7 ರ ತೀವ್ರತೆ ಇದೆ.

ಹಾನಿಯ ಬಗ್ಗೆ ಇನ್ನೂ ಯಾವುದೇ ವರದಿಗಳಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!