ಹೊಸದಿಗಂತ ಡಿಜಿಟಲ್ ಡೆಸ್ಕ್:
ಪೂರ್ವ ತೈವಾನ್ ನ ಹುವಾಲಿಯನ್ ಕೌಂಟಿಯ ಕರಾವಳಿಯಲ್ಲಿ ಬುಧವಾರ ರಾತ್ರಿ 5.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಕೇಂದ್ರ ಹವಾಮಾನ ಆಡಳಿತ ತಿಳಿಸಿದೆ.
ಅಂಕಿಅಂಶಗಳ ಪ್ರಕಾರ, ಭೂಕಂಪದ ಕೇಂದ್ರಬಿಂದುವು ಹುವಾಲಿಯನ್ ಕೌಂಟಿ ಹಾಲ ಪೂರ್ವ- ಈಶಾನ್ಯಕ್ಕೆ 8.9 ಕಿಲೋಮೀಟರ್ ದೂರದಲ್ಲಿ ಸಮುದ್ರದಲ್ಲಿ 25.2 ಕಿ.ಮೀ ಆಳದಲ್ಲಿದೆ ಎನ್ನಲಾಗಿದೆ.
ಭೂಕಂಪದ ನಂತರ ಯಾವುದೇ ಹಾನಿ ಅಥವಾ ಗಾಯಗಳ ಬಗ್ಗೆ ವರದಿಯಾಗಿಲ್ಲ.