September 28, 2026
Monday, September 28, 2026
spot_img

ಪಲ್ಯ, ಗ್ರೇವಿ & More 92 | 10 ನಿಮಿಷದಲ್ಲಿ ರೆಡಿ: ಬಿಸಿ ಬಿಸಿ ಚಪಾತಿ, ರೊಟ್ಟಿಗೆ ಸೂಪರ್ ಕಾಂಬಿನೇಷನ್ ಈರುಳ್ಳಿ ಪಲ್ಯ!

ಈರುಳ್ಳಿ ಪಲ್ಯವು ಚಪಾತಿ, ರೊಟ್ಟಿ, ಪೂರಿ ಅಥವಾ ದೋಸೆಯೊಂದಿಗೆ ಸವಿಯಲು ಕೇವಲ 10 ರಿಂದ 15 ನಿಮಿಷಗಳಲ್ಲಿ ಸುಲಭವಾಗಿ ತಯಾರಿಸಬಹುದು. ಮನೆಯಲ್ಲಿ ಯಾವುದೇ ತರಕಾರಿ ಇಲ್ಲದ ಸಮಯದಲ್ಲಿ ಇದು ಅತ್ಯುತ್ತಮವಾದ ರೆಸಿಪಿಯಾಗಿದೆ.

ಬೇಕಾಗುವ ಸಾಮಾಗ್ರಿಗಳು:
ಈರುಳ್ಳಿ
ಟೊಮೆಟೋ
ಎಣ್ಣೆ
ಸಾಸಿವೆ
ಜೀರಿಗೆ
ಕಡ್ಲೆಬೇಳೆ ಮತ್ತು ಉದ್ದಿನಬೇಳೆ
ಹಸಿಮೆಣಸಿನಕಾಯಿ
ಕರಿಬೇವಿನ ಸೊಪ್ಪು
ಅರಿಶಿನ ಪುಡಿ
ಉಪ್ಪು
ಕೊತ್ತಂಬರಿ ಸೊಪ್ಪು
ತೆಂಗಿನ ತುರಿ

ಮಾಡುವ ವಿಧಾನ
ಮೊದಲು ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಕಾದ ನಂತರ ಸಾಸಿವೆ, ಜೀರಿಗೆ ಹಾಕಿ ಸಿಡಿಸಿ. ಬಳಿಕ ಕಡ್ಲೆಬೇಳೆ, ಉದ್ದಿನಬೇಳೆ ಹಾಕಿ ತಿಳಿ ಕೆಂಪು ಬಣ್ಣ ಬರುವವರೆಗೆ ಹುರಿಯಬೇಕು. ನಂತರ ಇದಕ್ಕೆ ಕರಿಬೇವಿನ ಸೊಪ್ಪು ಮತ್ತು ಹಸಿಮೆಣಸಿನಕಾಯಿ ಹಾಕಿ ಬಾಡಿಸಿಕೊಂಡು. ಈಗ ಹೆಚ್ಚಿಟ್ಟುಕೊಂಡ ಈರುಳ್ಳಿಯನ್ನು ಹಾಕಿ, ಅದು ಸ್ವಲ್ಪ ಮೆತ್ತಗಾಗಿ ತಿಳಿ ಹಳದಿ ಬಣ್ಣಕ್ಕೆ ತಿರುಗುವವರೆಗೆ ಚೆನ್ನಾಗಿ ಫ್ರೈ ಮಾಡಬೇಕು. ಈರುಳ್ಳಿ ಬೆಂದ ನಂತರ ಹೆಚ್ಚಿದ ಟೊಮೆಟೋ ಚೂರುಗಳನ್ನು ಹಾಕಿ ಮೃದುವಾಗುವವರೆಗೆ ಬೇಯಿಸಿ. ನಂತರ ಅರಿಶಿನ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕೈಯಾಡಿಸಿ. ಬಾಣಲೆಯ ಮೇಲೆ ಮುಚ್ಚಳ ಮುಚ್ಚಿ 2 ರಿಂದ 3 ನಿಮಿಷ ಬೇಯಲು ಬಿಡಬೇಕು. ಇದರಿಂದ ಈರುಳ್ಳಿ ಮತ್ತು ಟೊಮೆಟೋ ಚೆನ್ನಾಗಿ ಬೆರೆತುಕೊಳ್ಳುತ್ತವೆ. ಕೊನೆಯದಾಗಿ ಸಣ್ಣದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಮತ್ತು ಹಸಿ ತೆಂಗಿನ ತುರಿ ಉದುರಿಸಿ ಮಿಶ್ರಣ ಮಾಡಿದರೆ, ಬಿಸಿಬಿಸಿಯಾದ ರುಚಿಕರ ಈರುಳ್ಳಿ ಪಲ್ಯ ಸವಿಯಲು ಸಿದ್ಧವಾಗುತ್ತದೆ.

Must Read