ಎಳೆಯ ಮಕ್ಕಳಿಂದ ಹಿರಿಯ ವಯಸ್ಕರವರೆಗೂ ಇಷ್ಟ ಪಡುವ ಈ ಸಪೋಟ ಹಣ್ಣಿನಲ್ಲಿ ಫೈಬರ್ ಅಂಶವು ಹೇರಳವಾಗಿದೆ. ಈ ಹಣ್ಣಿನಲ್ಲಿರುವ ಫೈಬರ್ ಗಳು ಬೇಗನೆ ಹಸಿವಾಗುವುದನ್ನು ತಡೆಯುತ್ತದೆ. ಜೀರ್ಣಾಂಗ ವ್ಯವಸ್ಥೆ ಸುಧಾರಿಸಿ, ತೂಕ ಇಳಿಸಲು ಸಹಕಾರಿಯಾಗಿದೆ.. ಇನ್ನೇನಿದೆ ನೋಡಿ ಈ ಹಣ್ಣಿನಲ್ಲಿ
ಈ ಶೀತಲಮಯ ವಾತಾವರಣದಲ್ಲಿ ನೆಗಡಿ, ಕೆಮ್ಮು, ಶೀತ ಹಾಗೂ ಕಫ ಇಂತಹ ಆರೋಗ್ಯ ಸಮಸ್ಯೆಗಳು ಕಾಡುವುದೇ ಹೆಚ್ಚು. ಈ ಕಾಯಿಲೆಯ ವಿರುದ್ಧ ಸೆಣಸಾಡಲು ರೋಗನಿರೋಧಕ ಶಕ್ತಿಯನ್ನು ಹೊಂದಿರುವುದು ಅಗತ್ಯ. ಸಪೋಟ ಹಣ್ಣಿನಲ್ಲಿ ವಿಟಮಿನ್ ಸಿ ಅಂಶವು ಸಮೃದ್ಧವಾಗಿದ್ದು, ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಆರೋಗ್ಯವನ್ನು ಕಾಪಾಡುತ್ತದೆ. ಅಲ್ಲದೇ ಕಫವನ್ನು ನೀರು ಮಾಡುವ ಶಕ್ತಿ ಇದೆ.
ಸಪೋಟ ಫೈಬರ್ ನಿಂದ ಸಮೃದ್ಧವಾಗಿದ್ದು, ಇದು ಕರುಳನ್ನು ಚೆನ್ನಾಗಿ ಸ್ವಚ್ಛಗೊಳಿಸುತ್ತದೆ. ಜೀರ್ಣ ಕ್ರಿಯೆಯನ್ನು ಸುಧಾರಿಸಿ, ಮಲಬದ್ಧತೆ ಸಮಸ್ಯೆಯು ಬರದಂತೆ ನೋಡಿಕೊಳ್ಳುತ್ತದೆ.
ಸಪೋಟ ಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ಇ ಅಂಶಗಳು ಸಮೃದ್ಧವಾಗಿದೆ. ಇದರ ನಿಯಮಿತ ಸೇವನೆಯು ಚರ್ಮವನ್ನು ಸ್ವಚ್ಛಗೊಳಿಸಿ, ಮುಖದ ಮೇಲಿನ ಸುಕ್ಕುಗಳನ್ನು ಕಡಿಮೆ ಮಾಡುತ್ತದೆ. ಅದಲ್ಲದೇ, ಚರ್ಮದ ಕೋಶಗಳ ಪುನರುತ್ಪಾದಿಸಿ, ಕಪ್ಪು ಚುಕ್ಕೆಗಳು ಮತ್ತು ಕಲೆಗಳಿಂದ ಉಂಟಾಗುವ ಗುರುತುಗಳನ್ನು ನಿವಾರಿಸುತ್ತದೆ.
ಪೊಟ್ಯಾಶಿಯಮ್ ಮಟ್ಟ ಕಡಿಮೆಯಿದ್ದಾಗ ಹೃದಯ ಸಮಸ್ಯೆಗಳು ಬರುವ ಸಾಧ್ಯತೆಯೇ ಹೆಚ್ಚು. ಆದರೆ ಈ ಕಿತ್ತಳೆಯಲ್ಲಿ ಪೊಟ್ಯಾಶಿಯಮ್ ಅಂಶವು ಹೇರಳವಾಗಿದ್ದು, ಹೀಗಾಗಿ ಇದರ ನಿಯಮಿತ ಸೇವನೆಯು ಹೃದಯರಕ್ತನಾಳದ ವ್ಯವಸ್ಥೆಯನ್ನು ಬಲ ಪಡಿಸಲು ಹಾಗೂ ಸರಿಯಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುತ್ತದೆ.
ಸಪೋಟ ಹಣ್ಣಿನಲ್ಲಿ ನಾರಿನ ಪ್ರಮಾಣ ಹೆಚ್ಚಾಗಿ ಸಿಗುತ್ತದೆ ಎಂದು ಹೇಳುತ್ತಾರೆ. ಹೀಗಾಗಿ ಇದು ಕರುಳಿನ ಭಾಗವನ್ನು ಸೋಂಕುಗಳಿಂದ ರಕ್ಷಿಸುವ ಕೆಲಸ ಮಾಡುತ್ತದೆ.ಕರುಳಿನ ಭಾಗದಲ್ಲಿ ನಾವು ಸೇವಿಸಿದ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ. ಇದರಿಂದ ಸರಾಗವಾದ ಮಲವಿಸರ್ಜನೆ ನಿಮ್ಮದಾಗಿ ಮಲಬದ್ಧತೆ ಸಮಸ್ಯೆ ನಿವಾರಣೆ ಆಗುತ್ತದೆ.

