Monday, September 15, 2025

HEALTH | ದೇಹದಲ್ಲಿ ವಿಟಮಿನ್ D ಕಡಿಮೆಯಾದ್ರೆ ಈ ಆಹಾರ ಸೇವಿಸಿ!

ದೇಹದಲ್ಲಿ ವಿಟಮಿನ್ ಡಿ 3 ಕೊರತೆಯಿಂದಾಗಿ ಮೂಳೆಗಳು ದುರ್ಬಲವಾಗುವುದು, ರೋಗನಿರೋಧಕ ಶಕ್ತಿ ಕಡಿಮೆಯಾಗುವುದು, ಆಯಾಸ ಹೆಚ್ಚುವುದು ಹಾಗೂ ಮನಸ್ಸಿನಲ್ಲಿ ಅಶಾಂತಿ ಉಂಟಾಗುವುದು ಸಾಮಾನ್ಯ. ಸೂರ್ಯನ ಬೆಳಕು ವಿಟಮಿನ್ ಡಿ 3 ಪಡೆಯಲು ಉತ್ತಮ ಮೂಲವಾದರೂ, ಕೆಲವೊಮ್ಮೆ ಅದು ಸಾಕಾಗುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಆಹಾರ ಪದ್ಧತಿಯಲ್ಲೇ ಕೆಲವೊಂದು ಬದಲಾವಣೆ ಮಾಡಿದರೆ ವಿಟಮಿನ್ ಡಿ 3 ಕೊರತೆಯನ್ನು ಕಡಿಮೆ ಮಾಡಬಹುದು.

ಮೀನುಗಳು: ಸಾಲ್ಮನ್, ಮ್ಯಾಕೆರೆಲ್, ಸಾರ್ಡೀನ್ ಮತ್ತು ಟ್ಯೂನ ಮೀನುಗಳಲ್ಲಿ ವಿಟಮಿನ್ ಡಿ 3 ಹೆಚ್ಚು ದೊರೆಯುತ್ತದೆ. ಹೃದಯ ಮತ್ತು ಮೆದುಳಿಗೆ ಉತ್ತಮವಾಗಿರುವ ಈ ಮೀನುಗಳನ್ನು ನಿಯಮಿತವಾಗಿ ಆಹಾರದಲ್ಲಿ ಸೇರಿಸಬಹುದು.

ಮೊಟ್ಟೆಯ ಹಳದಿ ಭಾಗ: ಮೊಟ್ಟೆಯ ಹಳದಿ ಭಾಗದಲ್ಲಿ ವಿಟಮಿನ್ ಡಿ ದೊರೆಯುತ್ತದೆ. ವಿಶೇಷವಾಗಿ ನಾಟಿ ಕೋಳಿಯ ಮೊಟ್ಟೆಗಳಲ್ಲಿ ಇದು ಹೆಚ್ಚು ಲಭ್ಯ. ಇದನ್ನು ಆಮ್ಲೆಟ್ ಅಥವಾ ಬೇರೆ ರುಚಿಕರ ಪದಾರ್ಥಗಳಲ್ಲಿ ತಯಾರಿಸಿ ಸೇವಿಸಬಹುದು.

ಹಾಲು ಮತ್ತು ಪಾನೀಯಗಳು: ಹಾಲು, ಸೋಯಾ ಹಾಲು, ಬಾದಾಮಿ ಹಾಲು, ಕಿತ್ತಳೆ ರಸ ಹಾಗೂ ಕೆಲವು ಉಪಾಹಾರ ಧಾನ್ಯಗಳಲ್ಲಿ ವಿಟಮಿನ್ ಡಿ ದೊರೆಯುತ್ತದೆ. ಇವುಗಳನ್ನು ದಿನನಿತ್ಯ ಸೇವನೆ ಮಾಡಿದರೆ ದೇಹಕ್ಕೆ ಅಗತ್ಯವಾದ ಪೋಷಕಾಂಶ ಲಭ್ಯವಾಗುತ್ತದೆ.

ಅಣಬೆಗಳು: ಸಸ್ಯಹಾರಿಗಳಿಗೆ ಅಣಬೆಗಳು ಉತ್ತಮ ಆಯ್ಕೆ. ಬೆಳಕಿನಲ್ಲಿ ಬೆಳೆದ ಅಣಬೆಗಳಲ್ಲಿ ಸ್ವಲ್ಪ ಪ್ರಮಾಣದ ವಿಟಮಿನ್ ಡಿ 3 ಕೂಡಿರುತ್ತದೆ. ಇದನ್ನು ತರಕಾರಿಗಳ ಜೊತೆಗೆ ಸೇರಿಸಿ ಸೇವಿಸಬಹುದು.

ಚೀಸ್, ಬೆಣ್ಣೆ ಮತ್ತು ತುಪ್ಪ: ಕೆಲವು ವಿಧದ ಚೀಸ್, ಬೆಣ್ಣೆ ಹಾಗೂ ದೇಸಿ ತುಪ್ಪಗಳಲ್ಲಿ ವಿಟಮಿನ್ ಡಿ 3 ಇರುತ್ತದೆ. ನಿಯಮಿತ ಪ್ರಮಾಣದಲ್ಲಿ ಸೇವಿಸಿದರೆ ದೇಹಕ್ಕೆ ಪೂರಕವಾಗುತ್ತದೆ.

ಇದನ್ನೂ ಓದಿ