March 11, 2026
Wednesday, March 11, 2026
spot_img

ಬಕಾಸುರನಂತೆ ತಿಂದರೂ ತೂಕ ಏರುತ್ತಿಲ್ಲವೇ? ನಿಮ್ಮ Metabolism ಬಗ್ಗೆ ನಿಮಗೆ ಗೊತ್ತಿರದ ಸತ್ಯಗಳು!

ಸಾಮಾನ್ಯವಾಗಿ ಅತಿಯಾಗಿ ತಿನ್ನುವವರು ದಪ್ಪಗಾಗುತ್ತಾರೆ ಎಂಬುದು ನಂಬಿಕೆ. ಆದರೆ ನಮ್ಮ ಸುತ್ತಮುತ್ತ ಕೆಲವು ವ್ಯಕ್ತಿಗಳು ಎಷ್ಟೇ ತಿಂದರೂ ಸಣ್ಣಕ್ಕೇ ಇರುತ್ತಾರೆ. “ನಿನಗೆ ಅದೆಲ್ಲಿ ಹೋಗಿ ಸೇರುತ್ತೋ?” ಎಂದು ಕಿಚಾಯಿಸುವುದು ಉಂಟು. ಆದರೆ ಇದಕ್ಕೆ ಕೇವಲ ಅದೃಷ್ಟವಷ್ಟೇ ಕಾರಣವಲ್ಲ, ಬದಲಿಗೆ ನಮ್ಮ ದೇಹದ ಒಳಗಿನ ಕೆಲವು ವೈಜ್ಞಾನಿಕ ಪ್ರಕ್ರಿಯೆಗಳು ಕಾರಣವಾಗಿರುತ್ತವೆ.

ಪ್ರತಿಯೊಬ್ಬರ ದೇಹದ ಚಯಾಪಚಯ ಕ್ರಿಯೆ ಬೇರೆ ಬೇರೆಯಾಗಿರುತ್ತದೆ. ಕೆಲವರ ದೇಹವು ವಿಶ್ರಾಂತಿ ಸ್ಥಿತಿಯಲ್ಲಿದ್ದಾಗಲೂ ಹೆಚ್ಚು ಕ್ಯಾಲೊರಿಗಳನ್ನು ದಹಿಸುತ್ತದೆ. ಇಂತಹವರು ಎಷ್ಟು ತಿಂದರೂ ಅವರ ದೇಹ ಆ ಶಕ್ತಿಯನ್ನು ತಕ್ಷಣವೇ ಬಳಸಿಕೊಳ್ಳುವುದರಿಂದ ಕೊಬ್ಬು ಶೇಖರಣೆಯಾಗುವುದಿಲ್ಲ.

ಕೆಲವೊಮ್ಮೆ ಇದು ಜೀನ್ಸ್‌ಗಳ ಆಟ. ನಿಮ್ಮ ತಂದೆ-ತಾಯಿ ಅಥವಾ ಕುಟುಂಬದವರು ತೆಳ್ಳಗಿದ್ದರೆ, ನಿಮಗೂ ಅದೇ ಗುಣಲಕ್ಷಣಗಳು ಬಂದಿರಬಹುದು. ನಿಮ್ಮ ಡಿಎನ್‌ಎ ನಿಮ್ಮ ದೇಹದ ಆಕಾರ ಮತ್ತು ತೂಕವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ನಮಗೆ ತಿಳಿಯದಂತೆ ನಾವು ಮಾಡುವ ಸಣ್ಣಪುಟ್ಟ ಚಲನೆಗಳು ಕೂಡ ಕ್ಯಾಲೊರಿ ಸುಡುತ್ತವೆ. ಕೆಲವರು ಸದಾ ಓಡಾಡುತ್ತಾ, ಕೆಲಸ ಮಾಡುತ್ತಾ ಇರುತ್ತಾರೆ. ಇಂತಹ “Non-Exercise Activity Thermogenesis” (NEAT) ಪ್ರಕ್ರಿಯೆಯಿಂದಾಗಿ ತಿಂದ ಆಹಾರ ಶಕ್ತಿಯಾಗಿ ಖರ್ಚಾಗುತ್ತದೆ.

ಥೈರಾಯ್ಡ್ ಗ್ರಂಥಿಯ ಅತಿಯಾದ ಕಾರ್ಯನಿರ್ವಹಣೆ ಇದ್ದಾಗ ದೇಹದ ತೂಕ ಹೆಚ್ಚಾಗುವುದಿಲ್ಲ. ಹಾರ್ಮೋನುಗಳ ಅಸಮತೋಲನವು ನೀವು ಎಷ್ಟೇ ಪೌಷ್ಟಿಕ ಆಹಾರ ತಿಂದರೂ ತೂಕ ಏರದಂತೆ ತಡೆಯಬಹುದು.

ಕೆಲವೊಮ್ಮೆ ನಾವು ಸೇವಿಸುವ ಆಹಾರ ಸರಿಯಾಗಿ ಜೀರ್ಣವಾಗದೆ ಅಥವಾ ಅದರಲ್ಲಿರುವ ಪೋಷಕಾಂಶಗಳು ರಕ್ತಕ್ಕೆ ಸೇರದೆ ಇರಬಹುದು. ಕರುಳಿನ ಸಮಸ್ಯೆ ಅಥವಾ ಜೀರ್ಣಕ್ರಿಯೆಯ ತೊಂದರೆಗಳಿದ್ದರೆ ಆಹಾರ ದೇಹಕ್ಕೆ ಹಿಡಿಯುವುದಿಲ್ಲ.

ಒತ್ತಡ ಮತ್ತು ಸರಿಯಾದ ನಿದ್ದೆ ಇಲ್ಲದಿರುವುದು ಕೂಡ ಕೆಲವರಲ್ಲಿ ತೂಕ ಇಳಿಕೆಗೆ ಕಾರಣವಾಗುತ್ತದೆ. ಅತಿಯಾದ ಆತಂಕವು ದೇಹದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !