ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಮತ್ತೆ ಇಡಿ ದಾಳಿ ಮುಂದುವರಿದಿದ್ದು, ಬಳ್ಳಾರಿಯ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ನಿವಾಸದ ಮೇಲೆ ದಾಳಿ ನಡೆದಿದೆ.
ನಿವಾಸ, ಕಚೇರಿ ಸೇರಿ ನಾಲ್ಕು ಕಡೆ ದಾಳಿ ನಡೆದಿದ್ದು, ಬೆಳ್ಳಂಬೆಳಗ್ಗೆ ಇಡಿ ಮನೆ ಬಾಗಿಲು ತಟ್ಟಿದೆ. ಸಾಕಷ್ಟು ದಾಖಲೆಗಳನ್ನು ಪರಿಶೀಲಿಸುತ್ತಿದೆ. ಬೆಂಗಳೂರು ಹಾಗೂ ಚೆನ್ನೈ ಕಚೇರಿ ಮೇಲೂ ದಾಳಿ ನಡೆದಿದೆ. ಗ್ರಾನೈಟ್ ಉದ್ಯಮದಲ್ಲಿ ಭರತ್ ಕುಟುಂಬ ತೊಡಗಿಸಿಕೊಂಡಿದ್ದು, ಕುಕನೂರು ಹಾಗೂ ಆಂಧ್ರಪ್ರದೇಶದಲ್ಲಿ ಕ್ವಾರಿಗಳನ್ನು ಹೊಂದಿದೆ.
ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.
#JUSTIN @dir_ed #ED Raid conducts on #Ballari city MLA @NBharathReddy_ Reddy house & Office also his relative and party leader #Pratap Reddy house, office searching by officials.@NewIndianXpress @XpressBengaluru @ramupatil_TNIE @AmitSUpadhye @CMofKarnataka @DKShivakumar pic.twitter.com/BeLNQCEVyO
— @Kiran_TNIE (@KiranTNIE1) February 10, 2024