ಹೊಸದಿಗಂತ ವರದಿ, ಹುಬ್ಬಳ್ಳಿ
ಸಿಎಂ ಸ್ಥಾನ ಪಡೆಯಲು ಕೇಂದ್ರದ ನಾಯಕರಿಗೆ 2,500 ಕೋಟಿ ನೀಡಬೇಕು ಎಂಬ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಬಹಿರಂಗವಾಗಿ ಹೇಳಿದ್ದಾರೆ. ಆದರೆ ಸರ್ಕಾರ ಇಲ್ಲಿಯವರೆಗೆ ಯಾವುದೇ ತನಿಖಾ ಸಂಸ್ಥೆಗೆ ಕ್ರಮವಹಿಸಿಲ್ಲ. ಈ ವಿಚಾರದಲ್ಲಿ ಸರ್ಕಾರ ಯಾರ ರಕ್ಷಣೆಗೆ ಮುಂದಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಪ್ರಶ್ನಿಸಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ತಕ್ಷಣ ಇಡಿ, ಸಿಐಡಿ ತನಿಖೆಗೆ ವಹಿಸಬೇಕು. ಯತ್ನಾಳ ಅವರನ್ನು ಕೂಡಲೇ ವಶಕ್ಕೆ ಪಡೆದು ಅವರನ್ನು ಸಾಕ್ಷಿಯಾಗಿಸಿಕೊಂಡು ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಬಿಜೆಪಿ ನಾಯಕರಿಂದ ಸಂವಿಧಾನ ಸುಡವ ಕೆಲಸ ಮಾಡುತ್ತಿದ್ದಾರೆ. ಮುಖ್ಯ ಮಂತ್ರಿ ಇಂತಹ ಕೃತ್ಯ ವೆಸಗುವರನ್ನು ಮತ್ತು ಪಕ್ಷವನ್ನು ರಕ್ಷಣೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲು ಈ ವಿಚಾರದಲ್ಲಿ ಭಾಗಿಯಾಗಿದ್ದಾರೆ. ಅವರು ಭ್ರಷ್ಟಾಚಾರ ಮಾಡುವರ ರಕ್ಷಣೆ ಮಾಡುವುದರಲ್ಲಿ ನಿರಂತರಾಗಿದ್ದಾರೆ. ಯತ್ನಾಳ ಅವರು ಹುಚ್ಚರಲ್ಲ, ಈ ರೀತಿ ಹೇಳಿಕೆ ನೀಡಲು ಎಂದರು.
ಹೊಟೇಲ್ ನಲ್ಲಿ ತಿಂಡಿಗೆ ದರ ನಿಗದಿ ಮಾಡುವಂತೆ ಬಿಜೆಪಿಯವರು ಸರ್ಕಾರದ ಹುದ್ದೆ ಸೇಲ್ ಮಾಡುತ್ತಿದ್ದಾರೆ. ಸಾಲು ಸಾಲು ಹಗರಣಗಳು ಬಯಲಿಗೆ ಬರುತ್ತಿವೆ ಎಂದರು.
ಜೆಡಿಎಸ್ ಶಾಸಕಾಂಗ ಪಕ್ಷದ ಅಧ್ಯಕ್ಷ ಕುಮಾರಸ್ವಾಮಿ ಅಕ್ರಮದ ನಡೆದಿರುವ ವಿಚಾರವನ್ನು ಸತ್ಯವೆಂದು ಹೇಳಿದ್ದಾರೆ. ಅವರ ಹೇಳಿಕೆ ಸರ್ಕಾರ ಕೇಳುತ್ತಿಲ್ಲ. ನಾವು ಸಿಎಂ ರಾಜೀನಾಮೆಗೆ ಒತ್ತಾಯಿಸಲ್ಲ ತನಿಖೆ ನಡೆಯಲಿ ಎಂದು ತಿಳಿಸಿದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ