ಬೆಂಗಳೂರಿನಲ್ಲಿ ಇಡಿ ದಾಳಿ: 11.25 ಕೋಟಿ ನಗದು, 120 ಕೋಟಿ ಮೌಲ್ಯದ ಆಸ್ತಿ ಜಪ್ತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಕ್ರಮ ಹಣ ವರ್ಗಾವಣೆ ಆರೋಪ ಸಂಬಂಧ ವಿಜಯ್ ತಾತ ಮತ್ತು ಸಹಚರರಿಗೆ ಸಂಬಂಧಿಸಿದ ಒಟ್ಟು ಎಂಟು ಸ್ಥಳಗಳಲ್ಲಿ ಇಡಿ ದಾಳಿ (ED Raid) ನಡೆಸಿದೆ.

ಈ ಕುರಿತು ಮಾಹಿತಿ ನೀಡಿದ ಜಾರಿ ನಿರ್ದೇಶನಾಲಯ (Enforcement Directorate-ED), ಆರೋಪಿಗಳ ಅಕೌಂಟ್‌ನಲ್ಲಿದ್ದ ಸುಮಾರು 11.25 ಕೋಟಿ ಹಣವನ್ನ ಫ್ರೀಜ್ ಮಾಡಲಾಗಿದ್ದು, 120 ಕೋಟಿ ಮೌಲ್ಯದ ಆಸ್ತಿ ಪತ್ರಗಳು, ಡಿಜಿಟಲ್ ಎವಿಡೆನ್ಸ್ ಜಪ್ತಿ ಮಾಡಲಾಗಿದೆ ಎಂದು ತಿಳಿಸಿದೆ.

ಫೆಬ್ರವರಿ 29 ಮತ್ತು ಮಾರ್ಚ್ 1 ರಂದು ಬೆಂಗಳೂರಿನ 8 ಸ್ಥಳಗಳಲ್ಲಿ ಪಿಎಂಎಲ್‌ಎ 2002 ರ ಅಡಿಯಲ್ಲಿ ಆರೋಪಿಗಳಾದ ವಿಜಯಾ ಆರ್ ತಾತಾ ಮತ್ತು ಅವರ ಸಹಚರರ ವಸತಿ ಆವರಣದಲ್ಲಿ ಇಡಿ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ್ದರು ಎಂದು ತಿಳಿಸಿದೆ.

ಶೋಧ ಕಾರ್ಯಾಚರಣೆಯ ಸಂದರ್ಭದಲ್ಲಿ ಬ್ಯಾಂಕ್ ಖಾತೆಯಲ್ಲಿ 11.25 ಕೋಟಿ ರೂಪಾಯಿ ಪತ್ತೆಯಾಗಿದ್ದು, ಇದನ್ನು ಫ್ರೀಜ್ ಮಾಡಲಾಗಿದೆ. ಇದರೊಂದಿಗೆ 120 ಕೋಟಿ (ಅಂದಾಜು) ಮೌಲ್ಯದ ಸ್ಥಿರ/ಚರ ಆಸ್ತಿಗಳಿಗೆ ಸಂಬಂಧಿಸಿದ ವಿವಿಧ ದಾಖಲೆಗಳನ್ನು ಮತ್ತು ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದೆ.

ಆರ್ ಎಸ್ ಚಂದ್ರಶೇಖರ್, ಮುನಿರಾಜು ಕೆ, ಡಿ ನಾಗೇಂದ್ರ ಬಾಬು, ಮಂಜುನಾಥ್ ಬಿ ಎಸ್ ಮತ್ತು ಸಂಬಂಧಿತ ಕಂಪನಿಗಳ ಕಚೇರಿಗಳ ಮೇಲೆ. ಸಂಚಯ ಲ್ಯಾಂಡ್ ಆ್ಯಂಡ್ ಎಸ್ಟೇಟ್ ಪ್ರೈ. ಲಿಮಿಟೆಡ್, ಬಿಸಿಸಿ ಕನ್ಸ್ಟ್ರಕ್ಷನ್ಸ್ ಪ್ರೈ. ಲಿಮಿಟೆಡ್, ಆಕಾಶ್ ಎಜುಕೇಶನ್ ಅಂಡ್ ಡೆವಲಪ್‌ಮೆಂಟ್ ಟ್ರಸ್ಟ್, ಎಸ್ ವಿ ಕಾಂಕ್ರೀಟ್ ಪ್ರಾಜೆಕ್ಟ್ಸ್ ಪ್ರೈವೇಟ್, M/s ಸಂಚಯ ಲ್ಯಾಂಡ್ & ಎಸ್ಟೇಟ್ ಪ್ರೈವೇಟ್ ಲಿಮಿಟೆಡ್ ಮತ್ತು ಇತರರಿಗೆ ಸಂಬಂಧಿಸಿದ ಪ್ರಕರಣಗಳು ಇದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!