ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಚೀನಾದ ಐದು ಲೋನ್ ಆಪ್ ಕಂಪನಿಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿ, 78 ಕೋಟಿ ರೂ. ಜಪ್ತಿ ಮಾಡಿದ್ದಾರೆ.
ಚೀನಾ ಲೋನ್ ಆಪ್ ವಿರುದ್ಧ ಸೈಬರ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದು, ಇದರ ಆಧಾರದ ಮೇಲೆ ಇಡಿ ಅಧಿಕಾರಿಗಳು ಆಚರಣೆ ಕೈಗೊಂಡಿದ್ದಾರೆ.
ಚೀನಾದ ಪ್ರಜೆಗಳು ಆಪ್ ಬಳಸಿ ಜನರಿಗೆ ಸಾಲ ನೀಡುತ್ತಿದ್ದರು. ಸಾಲ ಪಡೆದವರಿಂದ ಎಲ್ಲ ವಿವರ, ದಾಖಲೆ ಪಡೆಯುತ್ತಿದ್ದರು. ಸಾಲ, ಬಡ್ಡಿ ನೀಡಿ ಎಂದು ಕಿರುಕುಳ ನೀಡುತ್ತಿದ್ದರು. ಬಡ್ಡಿ ಕಟ್ಟಲು ವಿಫಲರಾದರೆ ಸಾಲ ಪಡೆದವರ ಪರಿಚಿತರ ನಂಬರ್‌ಗೆ ಅಶ್ಲೀಲ ಸಂದೇಶ ಕಳುಹಿಸಿ ಕಿರುಕುಳ ನೀಡುತ್ತಿದ್ದರು. ಈ ಬಗ್ಗೆ ತನಿಖೆ ನಡೆದಿದ್ದು, ಅಕ್ರಮ ಹಣ ವರ್ಗಾವಣೆ ನಡೆದಿರುವ ಬಗ್ಗೆ ಮಾಹಿತಿ ಹೊರಬಿದ್ದಿದೆ.
ಇಡಿ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡಿದ್ದು, ಭಾರತೀಯ ಪ್ರಜೆಗಳ ನಕಲಿ ಐಡಿ ಬಳಸಿ ನಿರ್ದೇಶಕರನ್ನು ನೇಮಿಸಿರುವುದು ತಿಳಿದುಬಂದಿದೆ.