ಛತ್ತೀಸ್​ಗಢ ಮಾಜಿ ಸಿಎಂ ಭೂಪೇಶ್​ ಬಘೇಲ್​ ನಿವಾಸದ ಮೇಲೆ ಇ.ಡಿ ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದ್ದಾರೆ.

ಭೂಪೇಶ್ ಅವರ ಪುತ್ರ ಚೈತನ್ಯ ಬಘೇಲ್​ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಶೋಧ ಕಾರ್ಯ ಕೈಗೊಂಡಿದ್ದಾರೆ.

ಭಿಲಾಯಿ ಅಲ್ಲಿರುವ ಭೂಪೇಶ್​ ನಿವಾಸದಲ್ಲೇ ಅವರ ಮಗ ಕೂಡ ವಾಸವಿರುವ ಹಿನ್ನೆಲೆಯಲ್ಲಿ, ಇ.ಡಿ ಅಧಿಕಾರಿಗಳು ಪ್ರಕರಣ ಸಂಬಂಧ ಹೊಸ ಸಾಕ್ಷ್ಯ ಆಧಾರದ ಮೇಲೆ ದಾಳಿ ನಡೆಸಿದ್ದಾರೆ. ಈ ವರ್ಷ ಮಾರ್ಚ್​ನಲ್ಲೂ ಕೂಡ ಚೈತನ್ಯ ಬಘೇಲ್ ಅವರ ವಿರುದ್ಧ​ ಇ.ಡಿ ಅಧಿಕಾರಿಗಳು ದಾಳಿ ಮಾಡಿದ್ದರು.

ಈ ಕುರಿತು ಎಕ್ಸ್ ಜಾಲತಾಣದಲ್ಲಿ ಪೋಸ್ಟ್​​ ಮಾಡಿರುವ ಮಾಜಿ ಸಿಎಂ ಭೂಪೇಶ್​ ಬಘೇಲ್​, ಇ.ಡಿ ಅಧಿಕಾರಿಗಳು ಆಗಮಿಸಿದ್ದಾರೆ. ಇಂದು ವಿಧಾನಸಭೆ ಅಧಿವೇಶದ ಕಡೆಯ ದಿನವಾಗಿದೆ. ಅದಾನಿಗಾಗಿ ತಮ್ನಾರ್‌ನಲ್ಲಿ ಮರಗಳನ್ನು ಕಡಿಯುತ್ತಿರುವ ವಿಚಾರವನ್ನು ಇಂದು ಪ್ರಸ್ತಾಪಿಸಬೇಕಿತ್ತು. ಆದರೆ ಭಿಲಾಯಿ ನಿವಾಸಕ್ಕೆ ‘ಸಾಹೇಬ್’ ಇ.ಡಿಯನ್ನು ಕಳುಹಿಸಿದ್ದಾರೆ ಎಂದು ಪೋಸ್ಟ್​ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!