ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಎಲ್2: ಎಂಪುರಾನ್’ ಚಿತ್ರದ ನಿರ್ಮಾಪಕ, ಕೇರಳದ ಉದ್ಯಮಿ ಗೋಕುಲಂ ಗೋಪಾಲನ್‌ರ ಚಿಟ್ ಫಂಡ್ ಕಂಪನಿಯ ಕಚೇರಿಗಳಲ್ಲಿ ಜಾರಿ ನಿರ್ದೇಶನಾಲಯ ಶೋಧ ಕಾರ್ಯ ನಡೆಸಿದದೆ.
ವಿದೇಶಿ ವಿನಿಮಯ ಕಾನೂನಿನ ಉಲ್ಲಂಘನೆ (ಎಫ್‌ಇಎಂಎ) ಆರೋಪದ ಮೇಲೆ ಈ ಶೋಧ ಕೈಗೊಳ್ಳಲಾಗಿತ್ತು. ಉಲ್ಲಂಘನೆಗೆ ಸಂಬಂಧಿಸಿದಂತೆ ಆಪಾದಿತ ದಾಖಲೆಗಳು ಮತ್ತು ₹ 1.50 ಕೋಟಿ ನಗದನ್ನು ವಶಕ್ಕೆ ಪಡೆಯಲಾಗಿದೆ ಎಂದು ಇ.ಡಿ ಪ್ರಕಟಣೆಯಲ್ಲಿ ತಿಳಿಸಿದೆ.
ಕೇರಳದ ಕೋಯಿಕ್ಕೋಡ್ ಮತ್ತು ತಮಿಳುನಾಡಿನ ಚೆನ್ನೈನ ಎರಡು ಸ್ಥಳಗಳಲ್ಲಿನ ಶ್ರೀ ಗೋಕುಲಂ ಚಿಟ್ಸ್ ಮತ್ತು ಹಣಕಾಸು ಕಂಪನಿ ಕಚೇರಿಗಳು ಮತ್ತು ಸಂಬಂಧಿಸಿದವರ ವಸತಿಗಳ ಮೇಲೆ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯಡಿ (ಎಫ್‌ಇಎಂಎ) ಶೋಧ ನಡೆಸಲಾಯಿತು.
ಈ ಆರೋಪಗಳಿಗೆ ಸಂಬಂಧಿಸಿದಂತೆ ಗೋಪಾಲನ್ ಅಥವಾ ಅವರ ಕಂಪನಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.