ರಾಮನೂರಿನಲ್ಲಿ ಬಿಸಿಗಾಳಿಯ ಎಫೆಕ್ಟ್: ಭಕ್ತರ ನೆರವಿಗೆ ವಾಟರ್‌ ಕೂಲರ್‌, ಒಆರ್‌ಎಸ್‌ ಸೌಲಭ್ಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದ ಕೆಲವು ದಿನಗಳಿಂದ ಉತ್ತರ ಭಾರತದಲ್ಲಿ ಬಿಸಿಲ ತಾಪ ಅಧಿಕವಾಗಿದ್ದು, ಹೀಗಾಗಿ ಅಯೋಧ್ಯೆ ರಾಮ ಮಂದಿರಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಬಿಸಿಗಾಳಿಯಿಂದ ರಕ್ಷಣೆ ನೀಡಲು ಸಹಾಯ ಕೇಂದ್ರ, ವಾಟರ್‌ ಕೂಲರ್‌ಗಳು ಮತ್ತು ಒಆರ್‌ಎಸ್‌ ಸೇರಿದಂತೆ ಹಲವು ವ್ಯವಸ್ಥೆಗಳನ್ನು ಮಾಡಲಾಗಿದೆ .

ಈ ಕುರಿತು ಆಡಳಿತಾಧಿಕಾರಿ ಮಾಹಿತಿ ನೀಡಿದ್ದು, ಜನವರಿಯಲ್ಲಿ ಅಯೋಧ್ಯೆಯಲ್ಲಿ ಬಾಲರಾಮ ಪ್ರಾಣ ಪ್ರತಿಷ್ಠಾಪನೆ ನೆರವೇರಿದ ಬಳಿಕ ದೇಶದಾದ್ಯಂತ ಲಕ್ಷಾಂತರ ಭಕ್ತರು ಭಗವಾನ್‌ ರಾಮನ ದರುಶನ ಪಡೆಯಲು ಭೇಟಿ ನೀಡುತ್ತಿದ್ದಾರೆ.ಇತ್ತ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಬೇಸಿಗೆಯ ಬಿಸಿ ಹೆಚ್ಚಾಗಿದ್ದು, ತಾಪಮಾನ 50 ಡಿಗ್ರಿ ಸೆಲ್ಸಿಯಸ್‌ ಗಡಿ ದಾಟಿದೆ. ದೇವರ ದರುಶನಕ್ಕಾಗಿ ಬರುವ ಭಕ್ತರು ಹೆಚ್ಚಿನ ಸಮಯ ಸರತಿ ಸಾಲಿನಲ್ಲಿ ನಿಲ್ಲುವುದರಿಂದ ಶಾಖದ ಅಲೆಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿ, ಭಕ್ತರಿಗೆ 500ಕ್ಕೂ ಹೆಚ್ಚು ಕುರ್ಚಿಗಳನ್ನು ಒಳಗೊಂಡ ಸಹಾಯ ಕೇಂದ್ರವನ್ನು ಸ್ಥಾಪಿಸಲಾಗಿದೆ. ಜತೆಗೆ ವಾಟರ್‌ ಕೂಲರ್‌ಗಳು ಮತ್ತು ಇತರ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ರಾಮ ಮಂದಿರ ಟ್ರಸ್ಟ್‌ನ ಉಸ್ತುವಾರಿ ಪ್ರಕಾಶ್‌ ಗುಪ್ತಾ ತಿಳಿಸಿದ್ದಾರೆ.

ದೇವಸ್ಥಾನ ಟ್ರಸ್ಟ್ ಹೊರತಾಗಿ ಸ್ಥಳೀಯ ಆಡಳಿತವೂ ಭಕ್ತರಿಗೆ ಹಲವು ವ್ಯವಸ್ಥೆಗಳನ್ನು ಏರ್ಪಡಿಸಿದೆ. ಶಾಖಾಘಾತದಿಂದ ಬಳಲುತ್ತಿರುವ ಭಕ್ತರಿಗೆ ನೆರವು ನೀಡಲು ಜಿಲ್ಲಾ ಆಸ್ಪತ್ರೆಯ ವೈದ್ಯರಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!