ಮೊಟ್ಟೆ ಅಂದ್ರೆ ಪೌಷ್ಟಿಕ ಆಹಾರ. ಪ್ರೋಟೀನ್, ವಿಟಮಿನ್, ಮಿನರಲ್ಸ್ ತುಂಬಾ ಇದ್ದು ದಿನನಿತ್ಯದ ಆಹಾರದಲ್ಲಿ ಇದನ್ನು ಹಲವರು ಸೇರಿಸಿಕೊಳ್ಳುತ್ತಾರೆ. ಆದರೆ ಮೊಟ್ಟೆ ತಿಂದಾಗ ಯಾವ ಆಹಾರವನ್ನು ಜೊತೆಗೇ ತಿನ್ನಬೇಕು, ಯಾವದನ್ನು ದೂರವಿಡಬೇಕು ಅನ್ನೋ ಅರಿವು ಬಹಳ ಮುಖ್ಯ. ತಪ್ಪು ಕಾಂಬಿನೇಷನ್ ಕೆಲವರಿಗೆ ಹೊಟ್ಟೆ ಸಮಸ್ಯೆ, ಅಜೀರ್ಣ, ಆಮ್ಲತ್ವ ಗಂಭೀರ ತೊಂದರೆಗೂ ಕಾರಣವಾಗಬಹುದು.
Milk | ಹಾಲು + ಮೊಟ್ಟೆ
ಮೊಟ್ಟೆ ಮತ್ತು ಹಾಲು ಎರಡೂ ಹೆವಿ ಪ್ರೋಟೀನ್ ಆಹಾರಗಳು. ಎರಡನ್ನೂ ಒಟ್ಟಿಗೆ ಸೇವಿಸಿದ್ರೆ ಕೆಲವರಿಗೆ ಹೊಟ್ಟೆ ಉಬ್ಬರ, ವಾಂತಿ, ಅಜೀರ್ಣ ಕಾಣಿಸಿಕೊಳ್ಳಬಹುದು. ವಿಶೇಷವಾಗಿ ಸಂವೇದನಾಶೀಲ ಜೀರ್ಣಾಂಗ ಇರುವವರಿಗೆ ಇದು ಹೆಚ್ಚು ತೊಂದರೆ ಕೊಡುತ್ತದೆ.
Banana | ಬಾಳೆಹಣ್ಣು + ಮೊಟ್ಟೆ
ಬಾಳೆಹಣ್ಣು ತಂಪು ಸ್ವಭಾವದ ಆಹಾರ, ಮೊಟ್ಟೆ ಬಿಸಿ ಗುಣ ಹೊಂದಿದೆ. ಈ ವಿರುದ್ದ ಗುಣಗಳ ಮಿಶ್ರಣ ಜೀರ್ಣಕ್ರಿಯೆ ನಿಧಾನಗೊಳಿಸಿ ಗ್ಯಾಸ್ಟ್ರಿಕ್ ಸಮಸ್ಯೆ ತರಬಹುದು.
Fish | ಮೀನು + ಮೊಟ್ಟೆ
ಎರಡೂ ಪ್ರೋಟೀನ್ ರಿಚ್. ಒಂದೇ ಊಟದಲ್ಲಿ ಸೇವಿಸಿದ್ರೆ ಕೆಲವರಿಗೆ ಚರ್ಮ ಅಲರ್ಜಿ, ಹೊಟ್ಟೆ ನೋವು, ಅಸಹನೀಯತೆ ಉಂಟಾಗಬಹುದು.
ಇದನ್ನೂ ಓದಿ:
Sugary Foods | ಸಕ್ಕರೆ ಜಾಸ್ತಿ ಇರುವ ಆಹಾರ + ಮೊಟ್ಟೆ
ಮೊಟ್ಟೆ ತಿಂದ ತಕ್ಷಣ ಸಿಹಿ ಪದಾರ್ಥ ಸೇವಿಸಿದ್ರೆ ಇನ್ಸುಲಿನ್ ಸ್ಪೈಕ್ ಆಗಿ ದಣಿವು, ಅಸ್ವಸ್ಥತೆ ಕಾಣಿಸಿಕೊಳ್ಳಬಹುದು.
Cold Drinks | ತಣ್ಣನೆಯ ಪಾನೀಯ + ಮೊಟ್ಟೆ
ಮೊಟ್ಟೆ ತಿಂದ ಬಳಿಕ ತಣ್ಣನೆಯ ಪಾನೀಯ ಕುಡಿದ್ರೆ ಜೀರ್ಣಕ್ರಿಯೆ ಹದಗೆಟ್ಟು ಎದೆ ಉರಿಯುವ ಅನುಭವ ಬರಬಹುದು.
ಸರಿಯಾದ ವಿಧಾನ ಏನು?
ಮೊಟ್ಟೆಯನ್ನು ತರಕಾರಿ, ಗೋಧಿ ರೊಟ್ಟಿ, ಬ್ರೆಡ್ ಅಥವಾ ಸ್ವಲ್ಪ ಹಸಿರು ಸೊಪ್ಪಿನ ಜೊತೆ ಸೇವಿಸಿದ್ರೆ ದೇಹಕ್ಕೆ ಉತ್ತಮ. ನಿಮ್ಮ ದೇಹದ ಪ್ರತಿಕ್ರಿಯೆ ಗಮನಿಸಿ ಆಹಾರ ಆಯ್ಕೆ ಮಾಡೋದು ಆರೋಗ್ಯದ ಗುಟ್ಟು.(ಈ ಲೇಖನವು ಅಂತರ್ಜಾಲ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ.)



