ಹೊಸದಿಗಂತ ಡಿಜಿಟಲ್ ಡೆಸ್ಕ್:
ಖಾಸಗಿ ಸಂಘಟನೆಗಳ ಒಕ್ಕೂಟದಿಂದ ಬೆಂಗಳೂರು ಬಂದ್ ಘೋಷಿಸಲಾಗಿದ್ದು, ಇಂದು ಆಟೋ, ಟ್ಯಾಕ್ಸಿ, ಬಸ್‌ಗಳು ಬೀದಿಗಿಳಿಯದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಬಂದ್‌ಗೆ ಕರೆ ಕೊಟ್ಟರೂ ಕೆಲ ವಾಹನ ಸವಾರರು ರಸ್ತೆಗಿಳಿದಿದ್ದು, ಅಂತವರಿಗೆ ಸಂಘಟಕರು ಮೊಟ್ಟೆ ಎಸೆದು ತರಾಟೆಗೆ ತೆಗೆದುಕೊಂಡಿದ್ದಾರೆ.
ಬಂದ್ ಅಂತ ಹೇಳಿದರೂ ಬಾಡಿಗೆ ಹೊಡೆಯುತ್ತಿರುವ ಆಟೋ, ಟ್ಯಾಕ್ಸಿ ಚಾಲಕರಿಗೆ ಮೊಟ್ಟೆ ಎಸೆದು ಆಕ್ರೋಶ ವ್ಯಕ್ತಪಡಿಸಿದ ಘಟನೆ ಹೆಬ್ಬಾಳದಲ್ಲಿ ನಡೆದಿದೆ.
ಇನ್ನೂ ಜಾಲಹಳ್ಳಿ ಸುತ್ತಮುತ್ತ ಓಡಾಡುತ್ತಿರುವ ಖಾಸಗಿ ವಾಹನಗಳನ್ನು ಆಟೋ ಚಾಲಕರು ತಡೆದು, ತರಾಟೆಗೆ ತೆಗೆದುಕೊಂಡರು.