ಈಜಿಪ್ಟ್ ಮಹಿಳೆ ಕಂಠದಲ್ಲಿ ಮೂಡಿಬಂತು ‘ಯೇ ದೋಸ್ತಿ ಹಮ್ ನಹೀ ತೋಡೆಂಗೆ’ ಹಾಡು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಎರಡು ದಿನಗಳ ಪ್ರವಾಸದ ಭಾಗವಾಗಿ ಭಾರತದ ಪ್ರಧಾನಿ ಮೋದಿ ಈಜಿಪ್ಟ್‌ನಲ್ಲಿದ್ದಾರೆ. ಈ ಸಂದರ್ಭದಲ್ಲಿ ಕೈರೋದಲ್ಲಿ ಈಜಿಪ್ಟ್ ಮಹಿಳೆಯೊಬ್ಬರು ಹಾಡಿದ ಬಾಲಿವುಡ್ ಹಾಡು ಪ್ರಧಾನಿ ಮೋದಿಯವರನ್ನು ಮೆಚ್ಚಿಸಿತು. ಇದರ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ.

ಶನಿವಾರ ಕೈರೋ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮೋದಿ ಅವರನ್ನು ಈಜಿಪ್ಟ್ ಪ್ರಧಾನಿ ಮೊಸ್ತಫಾ ಮಡ್ಬೌಲಿ ಸ್ವಾಗತಿಸಿದರು. ಕೈರೋದ ಹೋಟೆಲ್‌ಗೆ ಆಗಮಿಸಿದ ಮೋದಿ ಅವರನ್ನು ಭಾರತೀಯ ಸಮುದಾಯವು ಆತ್ಮೀಯವಾಗಿ ಸ್ವಾಗತಿಸಿತು. ಬಾಲಿವುಡ್ ಸಿನಿಮಾ ಹಾಡುಗಳಲ್ಲಿ ಸೂಪರ್ ಹಿಟ್ ಆಗಿರುವ ‘ಶೋಲೆ’ ಸಿನಿಮಾದ ‘ಯೇ ದೋಸ್ತಿ ಹಮ್ ನಹೀ ತೋಡೆಂಗೆ’ ಹಾಡನ್ನು ಈಜಿಪ್ಟ್ ಮಹಿಳೆಯೊಬ್ಬರು ಮೋದಿ ಅವರ ಮುಂದೆ ಹಾಡಿ ಮೆಚ್ಚುಗೆ ಪಡೆದರು. ಈ ಹಾಡು ಕೇಳಿ ಮೋದಿ ಚಪ್ಪಾಳೆ ತಟ್ಟಿದ್ದು ಕಂಡುಬಂತು.

ಈ ವೀಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ಎಲ್ಲರ ಮನ ಕದ್ದಿದೆ. ಈಜಿಪ್ಟ್ ಮಹಿಳೆ ತಾನು ಇನ್ನೂ ಭಾರತಕ್ಕೆ ಬಂದಿಲ್ಲ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿರುವುದು ಗಮನಾರ್ಹ. ಆದರೆ ಆರನೇ ವಯಸ್ಸಿನಿಂದ ಭಾರತೀಯ ಹಾಡುಗಳನ್ನು ಹಾಡುತ್ತಿದ್ದೇನೆ. ಮೋದಿಯವರನ್ನು ಭೇಟಿಯಾಗಿದ್ದು ತುಂಬಾ ಸಂತೋಷವಾಗಿದೆ. ಈ ಸಂದರ್ಭದಲ್ಲಿ ನಾನು ಭಾರತೀಯಳಂತೆ ಕಾಣುತ್ತೇನೆ ಎಂದು ಮೋದಿ ಹೇಳಿದ್ದಕ್ಕೆ ಬಹಳ ಸಂತೋಷವಾಯಿತು ಎಂದು ಮಹಿಳೆ ಹೇಳಿದರು.

ಕೈರೋದ ರಿಟ್ಜ್ ಕಾರ್ಲ್‌ಟನ್‌ನಲ್ಲಿ ಮೋದಿ ಅವರನ್ನು ಸ್ವಾಗತಿಸಲು ಭಾರತೀಯ ಸಮುದಾಯದ ಸದಸ್ಯರು ಜಮಾಯಿಸಿದರು. ಭಾರತದ ಧ್ವಜವನ್ನು ಬೀಸುತ್ತಾ ಮೋದಿ.. ಮೋದಿ.. ವಂದೇ ಮಾತರಂ ಎಂದು ಘೋಷಣೆ ಕೂಗಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!