April 9, 2026
Thursday, April 9, 2026
spot_img

ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆಸಿದ ಎಂಟು ಮಂದಿ ಅರೆಸ್ಟ್‌

ಹೊಸದಿಗಂತ ವರದಿ ಬಾಗಲಕೋಟೆ :

ಬಾಗಲಕೋಟೆ ನಗರದಲ್ಲಿ ಛತ್ರಪತಿ ಶಿವಾಜಿ ಜಯಂತಿ ಮೆರವಣಿಗೆಯಲ್ಲಿ ಕಲ್ಲು ತೂರಾಟ, ಚಪ್ಪಲಿ ಎಸೆತಕ್ಕೆ ಸಂಬಂಧಿಸಿದಂತೆ ಎಂಟು ಜನರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ್ ಗೋಯಲ್ ತಿಳಿಸಿದರು.

ಕಲ್ಲು ತೂರಾಟ ಪ್ರಕರಣದಲ್ಲಿ ಭಾಗಿಯಾಗಿದ್ದ ನವನಗರದ ತನ್ವೀರ್ ಶಕೀಲ್ ಹವಾಲ್ದಾರ್ ಹಾಗೂ ಬಾಗಲಕೋಟೆ ಪೆಂಡಾರಗಲ್ಲಿಯ ಮುಜ್ಜು ಉರ್ಫ್ ಮುಜಮಿಲ್ ತಂದೆ ರಾಜೇಸಾಬ್ ಕಮತಗಿ, ಸದ್ದಾಂ ತಂದೆ ರಾಜೇಸಾಬ್ ಕಮತಗಿ , ಪಯಾಜ್ ರಫೀಕ್ ಹಣಮಸಾಗರ, ಶಂಕರಲಿಂಗ ಗುಡಿ ಸಮೀಪದ ಸರ್ಪರಾಜ್ ಇಕ್ಬಾಲ್ ಲಸಾಬ್ ಚಾವೂಸ್ , ಬಾಗಲಕೋಟೆ ಪೆಂಡಾರಗಲ್ಲಿಯ
ರಿಯಾನ್ ಮಹ್ಮದ್ ಶೇಕ್ , ಅಯಾನ್ ಸಮೀರ ಗುಳೇದಗುಡ್ಡ, ವಸೀಮ್ ಅಲ್ಲಾಭಕ್ಷ ಶೇಖ ಅವರನ್ನು ಬಂಧಿಸಲಾಗಿದೆ ಎಂದರು.

ಬಾಗಲಕೋಟೆಯ ಪಂಕಾ‌ಮಸೀದಿ ಬಳಿ ಶಿವಾಜಿ ಮೆರವಣಿಗೆ ಸಾಗುವ ಸಂದರ್ಭದಲ್ಲಿ ರಾತ್ರಿ ಮಸೀದಿಯಲ್ಲಿ ಸೇರಿದ್ದವರಿಂದ ಮೊದಲು ಚಪ್ಪಲಿ ತೂರಿ ಬಂದಿದೆ‌.ನಂತರ ಎರಡು ಕಲ್ಲುಗಳು ತೂರಿ‌ಬಂದಿದ್ದು ಇದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ ಎಂದು ಹೇಳಿದರು.
ಘಟನೆಯ ಸುದ್ದಿ ಹರಡಿದಂತೆ ಬಾಗಲಕೋಟೆ ಯ. ಅಂಬಾಭವಾನಿ ದೇವಸ್ಥಾನ ಆವರಣದಲ್ಲಿ ಸಭೆ ನಡೆಸಿದ ಹಿಂದೂ ಸಮಾಜದವರು ಇನ್ನೊಮ್ಮೆ ಮೆರವಣಿಗೆ ನಡೆಸಲಾಗುವುದು. ಕಲ್ಲು ತೂರಾಟದಲ್ಲಿ ಎಂಟು ಜನ ಅಲ್ಲ ೨೦೦ ಜನ ಇದ್ದಾರೆ ಅವರ ಬಂಧನ ಆಗಬೇಕು ಎಂದು ಒತ್ತಾಯಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !