September 28, 2026
Monday, September 28, 2026
spot_img

ಶಿವಾಜಿ ಜಯಂತಿ ವೇಳೆ ಕಲ್ಲು ತೂರಾಟ: ಬಾಗಲಕೋಟೆ ಉದ್ವಿಗ್ನ, ಇನ್ನೂ ನಾಲ್ಕು ದಿನ ನಿಷೇಧಾಜ್ಞೆ ಜಾರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಾಗಲಕೋಟೆಯಲ್ಲಿ ನಡೆದ ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದೆ. ತಡರಾತ್ರಿ ಈ ಘಟನೆ ನಡೆದಿದ್ದು, ಕಿಲ್ಲಾ ಓಣಿಯಲ್ಲಿನ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.

ಶಾಂತವಾಗಿ ನಡೆಯುತ್ತಿದ್ದ ಮೆರವಣಿಗೆ ಮೇಲೆ ಯಾರೋ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ನೆಮ್ಮದಿಯಿಂದ ಹೋಗುತ್ತಿದ್ದ ಮೆರವಣಿಗೆ ಮೇಲೆ ಮಸೀದಿ ಕಡೆಯಿಂದ ಕಲ್ಲು ಬಂದಿದೆ.

ಹಿಂದೂ ಕಾರ್ಯಕರ್ತರು, ಬೆಳಗಾವಿ ಎಸ್‌ಪಿ, ಪೊಲೀಸ್‌ ಸಿಬ್ಬಂದಿ ಮೇಲೆ ಕಲ್ಲು ಬಿದ್ದಿದೆ. ತಕ್ಷಣವೇ ಪೊಲೀಸರು ಪರಿಸ್ಥಿತಿ ಅರ್ಥ ಮಾಡಿಕೊಂಡು ಜನರನ್ನು ಚದುರಿಸಿ ವಾತಾವರಣ ತಿಳಿಮಾಡಿದ್ದಾರೆ. ಸದ್ಯ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಸ್ಥಳದಲ್ಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಕಲ್ಲು ತೂರಾಟ ಚಪ್ಪಲಿ ಎಸೆತದ ಹಿನ್ನೆಲೆ ಫೆ.24ರ ಮಧ್ಯರಾತ್ರಿವರೆಗೆ ಹಳೆ ಬಾಗಲಕೋಟೆ, ನವನಗರ, ವಿದ್ಯಾಗಿರಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಕಲ್ಲು ತೂರಾಟ ಖಂಡಿಸಿದ ಯುವಕರು ಪ್ರತಿಭಟನೆಗೆ ಇಳಿದಿದ್ದಾರೆ.

Must Read