ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲಂಗಾಣದ ಮುಲುಗು ಜಿಲ್ಲೆಯಲ್ಲಿ 8 ಮಂದಿ ಮಾವೋವಾದಿಗಳು ಪೊಲೀಸರ ಮುಂದೆ ಶರಣಾಗಿದ್ದಾರೆ.
ಮಹಾರಾಷ್ಟ್ರ ಮತ್ತು ಛತ್ತೀಸ್ಗಢದ ಓರ್ವ ವಿಭಾಗೀಯ ಸಮಿತಿ ಸದಸ್ಯ, ಪ್ರದೇಶ ಸಮಿತಿ ಸದಸ್ಯರಿಬ್ಬರು ಸೇರಿದಂತೆ ಎಂಟು ಮಂದಿ ಮುಲುಗು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಶಬರೀಶ್ ಪಿ ಮುಂದೆ ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಲುಗು ಜಿಲ್ಲಾ ಪೊಲೀಸರ ಮುಂದೆ 68 ಮಂದಿ ಸೇರಿದಂತೆ ತೆಲಂಗಾಣದಲ್ಲಿ ಈ ವರ್ಷ ಜನವರಿಯಿಂದ 355 ನಕ್ಸಲರು ಶರಣಾಗಿದ್ದಾರೆ.
ಶರಣಾಗತರಾಗಿರುವ ಮವೋಗಳ ಕಲ್ಯಾಣಕ್ಕಾಗಿ ತೆಲಂಗಾಣ ಸರ್ಕಾರದಿಂದ ಅಗತ್ಯ ಕ್ರಮ ಜಾರಿ ಮಾಡಲಾಗುವುದು. ಶರಣಾಗತರು ಕುಟುಂಬದೊಂದಿಗೆ ಶಾಂತಿಯುತ ಜೀವನ ನಡೆಸುವ ಉದ್ದೇಶದಿಂದ ನಕ್ಸಲಿಸಂ ಹಾದಿಯನ್ನು ತೊರೆಯಲು ನಿರ್ಧರಿಸಿ, ಪೊಲೀಸರ ಮುಂದೆ ಬಂದಿದ್ದಾರೆ ಎಂದು ತಿಳಿಸಲಾಗಿದೆ.