ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೈದರಾಬಾದ್ನಲ್ಲಿರುವ ನಟ ಅಲ್ಲು ಅರ್ಜುನ್ ಜೂಬಿಲಿ ಹಿಲ್ಸ್ ನಿವಾಸದ ಮೇಲೆ ಉಸ್ಮಾನಿಯಾ ಯೂನಿವರ್ಸಿಟಿ ವಿದ್ಯಾರ್ಥಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಸಂಬಂಧ ಮಾತಾಡಿದ ಹೈದರಾಬಾದ್ ಪೊಲೀಸ್ರು ಕೇಸ್ನಲ್ಲಿ ಉಸ್ಮಾನಿಯಾ ಯೂನಿವರ್ಸಿಟಿ ಜಾಯಿಂಟ್ ಆಕ್ಷನ್ ಕಮಿಟಿ ಸಂಘಟನೆಗೆ ಸೇರಿದ 8 ಮಂದಿ ವಿದ್ಯಾರ್ಥಿ ಹೋರಾಟಗಾರರನ್ನು ಬಂಧಿಸಲಾಗಿದೆ. ಇವರು ಅಲ್ಲು ಅರ್ಜುನ್ ಮನೆಗೆ ನುಗ್ಗಿ ದಾಂಧಲೆ ಮಾಡಿದ್ದಾರೆ ಎಂದರು.
ಡಿಸೆಂಬರ್ 4ನೇ ತಾರೀಕು ಥಿಯೇಟರ್ ಒಂದರ ಬಳಿಕ ಪುಷ್ಪಾ 2 ಸಿನಿಮಾ ಪ್ರದರ್ಶನದ ವೇಳೆ ಕಾಲ್ತುಳಿತ ಆಗಿತ್ತು. ಈ ಸಂದರ್ಭದಲ್ಲಿ ಕಾಲ್ತುಳಿತದಲ್ಲಿ ಮಹಿಳೆ ಮೃತಪಟ್ಟಿದ್ದರು. ಈಗ ಉಸ್ಮಾನಿಯಾ ವಿವಿ ಜಾಯಿಂಟ್ ಆಕ್ಷನ್ ಕಮಿಟಿ ವಿದ್ಯಾರ್ಥಿ ಹೋರಾಟಗಾರರು ಅಲ್ಲು ಅರ್ಜುನ್ ವಿರುದ್ಧ ಹೋರಾಟ ನಡೆಸಿದ್ದರು. ಅಲ್ಲು ಅರ್ಜುನ್ ಮನೆ ಮೇಲೆ ಮೇಲೆ ಕಲ್ಲು ತೂರಾಟ ನಡೆಸಿ ಎಲ್ಲರ ಗಮನ ಸೆಳೆದರು.