ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಸ್ಟ್ರೇಲಿಯಾದಲ್ಲಿ ಭಾರೀ ಹಿಮಪಾತ ಸಂಭವಿಸಿದ್ದು, ಎಂಟು ಮಂದಿ ಮೃತಪಟ್ಟಿದ್ದಾರೆ. ವಿಯೆನ್ನಾದ ಸ್ಕೀ ರೆಸಾರ್ಟ್‌ಗಳಲ್ಲಿ ರಜೆಯ ಕಾರಣ ಜನಜಂಗುಳಿ ಹೆಚ್ಚಾಗಿತ್ತು. ಈ ವೇಳೆ ಹಿಮಪಾತಕ್ಕೆ ಸಿಲುಕಿದ ಎಂಟು ಮಂದಿ ಮೃತಪಟ್ಟಿದ್ದಾರೆ.
ಟೈರೋಲ್‌ನ ಸ್ಮಿರ್ನ್‌ನಲ್ಲಿ ಒಬ್ಬರು, ಸ್ಟೈಸ್ ಪಟ್ಟಣದ ಬಳಿ ಐವರು ಹಾಗೂ ಮೂರನೇ ಘಟನೆಯಲ್ಲಿ ಇನ್ನಿಬ್ಬರ ಮೃತದೇಹಗಳನ್ನು ಪತ್ತೆಮಾಡಲಾಗಿದೆ. ಮೃತಪಟ್ಟ ಎಲ್ಲರೂ ಸ್ಕೀಯರ್‌ಗಳು ಎನ್ನಲಾಗಿದೆ.
ತುರ್ತು ಸೇವೆಗಳು ತಕ್ಷಣವೇ ಕಾರ್ಯನಿರ್ವಹಿಸಿದ್ದು, ಒಬ್ಬರನ್ನು ರಕ್ಷಣೆ ಮಾಡಲಾಗಿದೆ. ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ಹಿಮಕುಸಿತ ಉಂಟಾಗಿದ್ದು, 10 ಮಂದಿ ಮೃತಪಟ್ಟಿದ್ದರು.