ಹೊಸದಿಗಂತ ವರದಿ,ಹಾವೇರಿ
ಮಹಾತ್ಮಗಾಂಧಿ ನರೇಗಾ ಯೋಜನಯಡಿ ಜಲಶಕ್ತಿ ಕಾರ್ಯಕ್ರಮದಡಿ ಕೈಗೊಳ್ಳಲಾದ, ನೈಸರ್ಗಿಕ ಸಂಪನ್ಮೂಲ ರಕ್ಷಣಾ ಕಾಮಗಾರಿಗಳ ವೀಕ್ಷಣೆಗೆ ಜಿಲ್ಲೆಗೆ ಆಗಮಿಸಿದ್ದ ಕೇಂದ್ರ ಹಣಕಾಸು ಸಚಿವಾಲಯದ ಜಲಾಶಕ್ತಿ ಅಭಿಯಾನ ಕೇಂದ್ರದ ನೋಡಲ್ ಅಧಿಕಾರಿ ರೋಜ್ ಮೇರಿ ಹಾವೇರಿ ತಾಲೂಕಿನ ಬಸಾಪುರ ಗ್ರಾಮದಲ್ಲಿ ಕೈಗೊಳ್ಳಲಾದ ಕಾಮಗಾರಿಗಳನ್ನು ವೀಕ್ಷಣೆ ಮಾಡಿದರು.
ಬುಧವಾರ ಬಸಾಪುರ ಗ್ರಾಮದ ಅರಣ್ಯ ಪ್ರದೇಶದಲ್ಲಿ ಉದ್ಯೋಗ ಖಾತರಿ ಯೋಜನೆ ಅಡಿ ನಿರ್ಮಾಣವಾದ ಚೆಕ್ ಡ್ಯಾಮ್ ಮತ್ತು ಕೆರೆ ವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ಕೇಂದ್ರ ತಂಡದ ಕೆ.ಅಬ್ರಹಂ, ಕಾರ್ಯನಿರ್ವಾಹಾಕ ಅಭಿಯಂತರ ಮಂಜುನಾಥ್, ತಾ.ಪಂ ಇಒ ಡಾ. ಬಸವರಾಜ.ಡಿ.ಸಿ., ಜಿ.ಪಂ ಸಹಾಯಕ ಕಾರ್ಯನಿರ್ವಾಹಾಕ ಇಂಜನೀಯರ ಪ್ರವೀಣ ಬಿರಾದರ, ವಲಯ ಅರಣ್ಯಾಧಿಕಾರಿ ರಾಮಪ್ಪ ಪೂಜಾರ, ನೀಲಪ್ಪ ಚಾವಡಿ ಇತರರಿದ್ದರು.