334 ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳಿಗೆ ಗೇಟ್ ಪಾಸ್ ಕೊಟ್ಟ ಚುನಾವಣಾ ಆಯೋಗ

ಹೊಸದಿಗಂತ ಡಿಜಿಟಲ್ ಡೆಸ್ಕ್:

2019ರಿಂದ ಈಚೆಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅಗತ್ಯ ಮಾನದಂಡ ಪೂರೈಸಲು ವಿಫಲವಾದ 334 ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳನ್ನ ಪಟ್ಟಿಯಿಂದ ತೆಗೆದುಹಾಕಿರುವುದಾಗಿ ಶನಿವಾರ ತಿಳಿಸಿದೆ.

ಈ ಪಕ್ಷಗಳು ಕಳೆದ 6 ವರ್ಷಗಳಲ್ಲಿ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ ಹಾಗೂ ಭೌತಿಕವಾಗಿ ಎಲ್ಲಿಯೂ ಕಚೇರಿಗಳನ್ನು ತೆರೆದಿಲ್ಲ ಎಂದು ಆಯೋಗ ಹೇಳಿದೆ.

ಅಲ್ಲದೇ ಮಾನ್ಯತೆ ಪಡೆಯದ ಇಂತಹ ಇನ್ನೂ 2,520 ರಾಜಕೀಯ ಪಕ್ಷಗಳು ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿವೆ. ಸದ್ಯ 6 ರಾಷ್ಟ್ರೀಯ ಪಕ್ಷಗಳು ಮತ್ತು 67 ಪ್ರಾದೇಶಿಕ ಪಕ್ಷಗಳು ದೇಶದಲ್ಲಿವೆ ಎಂದು ಆಯೋಗ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!