ಚುನಾವಣಾ ಅಕ್ರಮ: ರಾವಲ್ಪಿಂಡಿ ಆಯುಕ್ತ ಲಿಯಾಖತ್ ಅಲಿ ಚಟ್ಟಾ ರಾಜಿನಾಮೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಪಾಕಿಸ್ಥಾನದ ರಾವಲ್ಪಿಂಡಿ ಆಯುಕ್ತ ಲಿಯಾಖತ್ ಅಲಿ ಚಟ್ಟಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನದಲ್ಲಿ ಫೆ.8ರಂದು ನಡೆದಿದ್ದ ಚುನಾವಣೆ ಫಲಿತಾಂಶ ತಿರುಚಲಾಗಿದೆ. ನಾನು ರಾವಲ್ಪಿಂಡಿ ಜನರಿಗೆ ಅನ್ಯಾಯ ಮಾಡಿದ್ದೇನೆ ಎಂದು ಹೇಳಿದ್ದಾರೆ.

ನಾವು ಸೋತವರನ್ನು 50 ಸಾವಿರ ಮತಗಳ ಅಂತರದಿಂದ ವಿಜೇತರನ್ನಾಗಿಸಿದ್ದೇವೆ. ನಮ್ಮ ಮೇಲೆ ಆತ್ಮಹತ್ಯೆಗೆ ಒಳಗಾಗುವ ಮಟ್ಟಿಗೆ ಒತ್ತಡಗಳಿದ್ದವು. ಈ ಬಗ್ಗೆ ನನ್ನ ವಿಭಾಗದ ಚುನಾವಣಾಧಿಕಾರಿಗಳಲ್ಲಿ ನಾನು ಕ್ಷಮೆ ಕೇಳುತ್ತಿದ್ದೇನೆ. ಎಲ್ಲಾ ರಾಜಕಾರಣಿಗಳು ಯಾವುದೇ ತಪ್ಪು ಮಾಡಬಾರದು ಎಂದು ಇಡೀ ಅಧಿಕಾರಿಗಳಲ್ಲಿ ನನ್ನ ವಿನಂತಿ ಎಂದು ಅವರು ಹೇಳಿದ್ದಾರೆ.

ಇದೇ ವೇಳೆ ಚಟ್ಟಾ ಅವರ ಹೇಳಿಕೆಗೆ ಪ್ರತಿಯಾಗಿ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪ್ರತಿಕ್ರಿಯಿಸಿದ್ದು, ರಾವಲ್ಪಿಂಡಿ ಆಯುಕ್ತರ ಈ ಹೇಳಿಕೆ ಬೆನ್ನಿಗೇ ಮುಖ್ಯ ಚುನಾವಣಾ ಆಯುಕ್ತರು ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!