ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ ಹಾಲು ಒಕ್ಕೂಟದ ನಿರ್ದೇಶಕರ ಆಯ್ಕೆ: ಪಟಾಕಿ ಸಿಡಿಸಿ ಸಂಭ್ರಮ

ಹೊಸ ದಿಗಂತ ವರದಿ, ಬಳ್ಳಾರಿ:

ನಗರದ ರಾಬವಿಕೋ ಒಕ್ಕೂಟದ ಕಚೇರಿಯಲ್ಲಿ, ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ ಹಾಲು ಉತ್ಪಾದಕರ ಒಕ್ಕೂಟದ ಚುನಾವಣೆ ಗುರುವಾರ ನಡೆದಿದ್ದು, 12 ನೂತನ ಸದಸ್ಯರು ಆಯ್ಕೆಯಾದರು. ಕೊಪ್ಪಳ ಜಿಲ್ಲೆಯ, ಕೃಷ್ಣಾ ರೆಡ್ಡಿ 106 ಮತಗಳು, ಮಹಿಳಾ ಕ್ಷೇತ್ರದಿಂದ ಕುಕನೂರಿನ ಕಮಲವ್ವ 92 ಮತಗಳು, ಮಂಜುನಾಥ್ 94, ಎನ್.ಸತ್ಯನಾರಾಯಣ 93 ಮತಗಳನ್ನು ಪಡೆದು ಆಯ್ಕೆಯಾದರು.

ರಾಯಚೂರು ಜಿಲ್ಲೆಯಿಂದ ಬಿ.ಪ್ರವೀಣ್ ಕುಮಾರ್ 31 ಮತಗಳು, ಅಮರಗುಂಡಪ್ಪ 31 ಮತಗಳು, ಭೀಮನ ಗೌಡ 24 ಮತಗಳು, ಮಹಿಳಾ ಕ್ಷೇತ್ರದಿಂದ ಎನ್.ಸೀತಾರಾಮ ಲಕ್ಷ್ಮಿ ಅವರು 28 ಮತಗಳನ್ನು ಪಡೆದು ಆಯ್ಕೆಯಾದರು.

ಅಖಂಡ ಬಳ್ಳಾರಿ ಜಿಲ್ಲೆಯಿಂದ ಎಲ್. ಬಿ. ಪಿ. ಭೀಮಾ ನಾಯ್ಕ್ 183 ಮತಗಳು, ಎಚ್. ಮರಳು ಸಿದ್ದಪ್ಪ 165, ಐಗೋಳು ಚಿದಾನಂದ 159 ಮತಗಳು, ಮಹಿಳಾ ಕ್ಷೇತ್ರದಿಂದ ರತ್ನಮ್ಮ ಎಚ್ 147 ಮತಗಳನ್ನು ಪಡೆದು ಆಯ್ಕೆಯಾದರು ಎಂದು ಚುನಾವಣೆ ಅಧಿಕಾರಿ ಪ್ರಮೋದ್ ಅವರು ಅಧಿಕೃತವಾಗಿ ಘೋಷಿಸಿದರು.

ಫಲಿತಾಂಶ ಹೊರ ಬೀಳುತ್ತಿದ್ದಂತೆ ಅಪಾರ ಬೆಂಬಲಿಗರು, ಅಭಿಮಾನಿಗಳು ರಾಬಕೋವಿ ಹಾಲು ಒಕ್ಕೂಟದ (ಕೆಎಂಎಫ್) ಕಚೇರಿ ಬಳಿಯ ಶ್ರೀ ಕನಕದಾಸ ವೃತ್ತದ ಬಳಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ನಂತರ ನೂತನ ಸದಸ್ಯರಿಗೆ ಚುನಾವಣೆ ಅಧಿಕಾರಿ ಪ್ರಮೋದ್ ಅವರು ಪ್ರಮಾಣ ಪತ್ರ ವಿತರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!