ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಆದಷ್ಟು ಬೇಗ ವಿಪಕ್ಷ ನಾಯಕ ಆಯ್ಕೆಯಾಗುತ್ತದೆ. ಎಲ್ಲರೂ ಅದೇ ಪ್ರಶ್ನೆ ಕೇಳುತ್ತಿದ್ದಾರೆ. ಈಗಾಗಲೇ ವಿಳಂಬವಾಗಿದೆ. ಆದಷ್ಟು ಬೇಗ ನೇಮಕವಾಗುತ್ತದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ಭದ್ರಾವತಿ ವಿಐಎಸ್ ಎಲ್ ಶತಮಾನೋತ್ಸವ ನಡೆಯಲಿದೆ. ಇದಕ್ಕಾಗಿ ಶಿವಮೊಗ್ಗಕ್ಕೆ ಆಗಮಿಸಿದ್ದೇನೆ. ಕಾರ್ಯಕ್ರಮಕ್ಕೆ ಸುತ್ತೂರು ಶ್ರೀಗಳು, ಮೈಸೂರು ಮಹಾರಾಜರು ಆಗಮಿಸುತ್ತಾರೆ ಎಂದರು.
ಬಿಜೆಪಿ ಬರ ಅಧ್ಯಯನ ಪ್ರವಾಸ ಆರಂಭ ವಿಚಾರಕ್ಕೆ ಮಾತನಾಡಿದ ಅವರು, ಇಂದಿನಿಂದ ಬರ ಅಧ್ಯಯನ ಪ್ರವಾಸ ಆರಂಭವಾಗಿದೆ. ನಾನು ವಿಐಎಸ್ ಎಲ್ ಕಾರ್ಯಕ್ರಮವಿದ್ದ ಕಾರಣ ಹೋಗಿಲ್ಲ. ಎರಡು ದಿನದ ನಂತರ ಪ್ರವಾಸ ತಂಡ ಸೇರಿಕೊಳ್ಳುತ್ತೇನೆ ಎಂದರು.