ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಕುಸ್ತಿ ಫೆಡರೇಶನ್ ಚುನಾವಣೆ ಜುಲೈ 4ರಂದು ನಡೆಯಲಿದೆ ಎಂದು ಭಾರತೀಯ ಒಲಿಂಪಿಕ್ ಸಂಸ್ಥೆ ಸೋಮವಾರ ಪ್ರಕಟಿಸಿದೆ.
ಒಲಿಂಪಿಕ್ ಅಸೋಸಿಯೇಷನ್ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಮಹೇಶ್ ಮಿತ್ತಲ್ ಕುಮಾರ್ ಅವರನ್ನು ಚುನಾವಣೆಗೆ ಚುನಾವಣಾಧಿಕಾರಿಯಾಗಿ ನೇಮಿಸಿದೆ.
ಈ ಕುರಿತು ಹೇಳಿಕೆ ನೀಡಿದ IOA , ಐಒಎ ಡಬ್ಲ್ಯುಎಫ್‌ಐ ಕಾರ್ಯಕಾರಿ ಸಮಿತಿಯ ಚುನಾವಣೆಗಳನ್ನು ನಡೆಸಲು ಮುಂದಾಗಬೇಕಿದೆ ಮತ್ತು ಡಬ್ಲ್ಯುಎಫ್‌ಐನ ಚುನಾವಣೆಗಳನ್ನು ನಡೆಸಲು ನಿಮ್ಮನ್ನು ಚುನಾವಣಾಧಿಕಾರಿಯಾಗಿ ನೇಮಿಸಲಾಗುತ್ತಿದೆ. ಜತೆಗೆ ನಿಮಗೆ ಒಬ್ಬ ಸಹಾಯಕ ಚುನಾವಣಾಧಿಕಾರಿ ಮತ್ತು ಇತರ ಸಿಬ್ಬಂದಿಯನ್ನು ನೇಮಿಸಲು ಅವಕಾಶ ನೀಡಲಾಗುವುದು ಎಂದುತಿಳಿಸಿದೆ.
ಕುಸ್ತಿ ಫೆಡರೇಶನ್ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಮಹಿಳಾ ಕುಸ್ತಿ ಪಟುಗಳು ಅವರ ಮೇಲೆ ಲೈಂಗಿಕ ಆರೋಪ ಮಾಡಿದ್ದು, ಈಗಾಗಲೇ ಅವರ ಪೊಲೀಸ್ ತನಿಖೆಗೆ ಒಳಪಡಿಸಲಾಗಿದೆ. ಇದರ ನಡುವೆ ಚುನಾವಣೆ ಘೋಷಣೆಯಾಗಿದೆ.