ಹೊಸದಿಗಂತ ವರದಿ,ಆಲೂರು :
ನಾಲ್ಕು ರಾಜ್ಯದ ಪೈಕಿ ಮೂರು ರಾಜ್ಯದಲ್ಲಿ ಬಿಜೆಪಿ ಭಾರಿ ಮುನ್ನಡೆ ಸಾಧಿಸಿದೆ ಬಹುತೇಕ ಮೂರು ರಾಜ್ಯದಲ್ಲಿ ಬಾರಿ ಗೆಲುವು ಸಾದಿಸಿದ ಹಿನ್ನೆಲೆಯಲ್ಲಿ ಆಲೂರಿನಲ್ಲಿ ಬಿಜೆಪಿ ಕಾರ್ಯರ್ತರು ಪಟಾಕಿ ಹಚ್ಚಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
ರಾಜಾಸ್ಥಾನ, ಛತ್ತೀಸ್ ಗಡ ಹಾಗೂ ಮಧ್ಯಪ್ರದೇಶದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ, ತೆಲಂಗಾಣದಲ್ಲಿ ಕಾಂಗ್ರೆಸ್ ಬಹುತೇಕ ಅಧಿಕಾರ ಹಿಡಿಯುವ ಸಾಧ್ಯತೆ ಹೆಚ್ಚಿದೆ, ಬೆಳಗಾವಿಯಲ್ಲೂ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಿದ್ದಾರೆ ಬಿಜೆಪಿ ಶಾಸಕ ಸಿಮೆಂಟ್ ಮಂಜು ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು,ಪಟ್ಟಣದ ಬಸ್ ನಿಲ್ದಾಣ ಮುಂಭಾಗದಲ್ಲಿ ಬಿಜೆಪಿ ಧ್ವಜ ಹಿಡಿದು ಸಂಭ್ರಮಿಸಿದರು ಹರ್ ಹರ್ ಮೋದಿ ಘರ್ ಘರ್ ಮೋದಿ ಅಂತಾ ಘೋಷಣೆ ಕೂಗಿ, ಬಿಜೆಪಿ ಬಾವುಟ ಹಿಡಿದು ಕಾರ್ಯಕರ್ತರು ಕುಣಿದು ಕುಪ್ಪಳಿಸಿದರು.
ಶಾಸಕ ಸಿಮೆಂಟ್ ಮಂಜು ಮಾತನಾಡಿ ಕಾಂಗ್ರೆಸ್ ಪಕ್ಷ ಗ್ಯಾರಂಟಿ ಹೆಸರಿನಲ್ಲಿ ಇಡೀ ದೇಶದಲ್ಲಿ ಮೋಡಿ ಮಾಡಲು ಹೊರಟಿತ್ತು ಅದರೆ ನಾಲ್ಕು ರಾಜ್ಯದ ಚುನಾವಣೆಯಲ್ಲಿ ಜನ ಕಾಂಗ್ರೆಸ್ ಗೆ ಬುದ್ದಿ ಕಲಿಸಿದ್ದಾರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೋದಿಜಿಯವರ ನೇತೃತ್ವದಲ್ಲಿ ಪುನಃ ಬಿಜೆಪಿ ಅಧಿಕಾರಕ್ಕೆ ಬರಲಿದೆ ಮದ್ಯಪ್ರದೇಶ,ರಾಜಸ್ಥಾನ,ಛತ್ತಸಗಡ ಜೊತೆಗೆ ತೆಲಂಗಾಣದಲ್ಲಿಯೂ ಅಧಿಕಾರ ಹಿಡಿಯುವ ಸೂಚನೆಗಳಿವೆ ಮೂರ್ನಾಲ್ಕು ತಿಂಗಳಲ್ಲಿ ರಾಜ್ಯದ ರಾಜಕಾರಣ ಏನು ಬೇಕಾದರೂ ಆಗಬಹುದು ಎಂದರು ಎಂದರು.
ತಾಲ್ಲೂಕು ಅಧ್ಯಕ್ಷ ಹುಲ್ಲಹಳ್ಳಿ ನಾಗರಾಜ್ ಮಾತನಾಡಿ ರಾಜ್ಯದ ಕಾಂಗ್ರೆಸ್ ಪಕ್ಷ ನಾಲ್ಕು ರಾಜ್ಯದಲ್ಲಿ ಅಧಿಕಾರ ಹಿಡಿಯುವ ಕನಸು ಕಾಣುತ್ತಿತ್ತು ಅದರೆ ಆ ಭಾಗದ ಜನ ಸರಿಯಾಗಿ ಕಾಂಗ್ರೆಸ್ ಪಕ್ಷಕ್ಕೆ ಬುದ್ದಿ ಕಲಿಸಿದ್ದಾರೆ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಯಾವುದೇ ಚುನಾವಣೆ ನಡೆದರೂ ಎನ್ ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ ಎಂದರು.
ಸಕಲೇಶಪುರ ತಾಲ್ಲೂಕು ಬಿಜೆಪಿ ಹಿರಿಯ ಮುಖಂಡ ರಾಜಕುಮಾರ್ ಮಾತನಾಡಿ ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರ ಆಡಳಿತವನ್ನು ಇಡೀ ವಿಶ್ವವೇ ಕೊಂಡಾಡುತ್ತಿದೆ ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ತಿರುಕನ ಕನಸು ಕಾಣುತ್ತಿದೆ ರಾಜಸ್ಥಾನ,ಮದ್ಯಪ್ರದೇಶ,ಹಾಗೂ ಚತ್ತಿಸ್ಗಡ ಚುನಾವಣೆಯಲ್ಲಿ ಜನರು ಸರಿಯಾಗಿ ಬುದ್ದಿ ಕಲಿಸಿದ್ದಾರೆ ಮುಂಬರುವ ಲೋಕಸಭಾ ಚುನಾವಣೆಗೆ ಈ ಚುನಾವಣೆ ದಿಕ್ಸೂಚಿ ಎಂದರು.
ವಿಶ್ವ ಹಿಂದು ಪರಿಷತ್ ಹಿರಿಯ ಮುಖಂಡ ಹಳೆ ಆಲೂರು ಲಕ್ಷ್ಮಣ್ ಮಾತನಾಡಿ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರ ನೇತೃತ್ವದ ಸರ್ಕಾರ ದೇಶದ ಜನಸಾಮಾನ್ಯರ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ಮಾಡುತ್ತಿದೆ ಮೋದಿಯವರು ದೇಶ ಕಂಡ ಮಹಾನ್ ನಾಯಕ ಅವರ ಆಡಳಿತ ಕಾರ್ಯವೈಖರಿ ಇಡೀ ವಿಶ್ವವೇ ಮೆಚ್ಚುವಂತಹದ್ದು ಅಂತಹದ್ದರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದ ಕನಸು ಕಾಣುತ್ತಿತ್ತು ಜನ ಸರಿಯಾಗಿ ಬುದ್ದಿ ಕಲಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲ್ಲೂಕು ಅಧ್ಯಕ್ಷ ಹುಲ್ಲಹಳ್ಳಿ ನಾಗರಾಜ್,ಬಿಜೆಪಿ ಹಿರಿಯ ಮುಖಂಡ ಕಣಗಾಲ್ ಲೋಕೇಶ್,ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಅನೂಪ್ ರಾಜ್,ಪಟ್ಟಣ ಸದಸ್ಯ ಹರೀಶ್,ಲಕ್ಷ್ಮಣ ಹಳೆ ಆಲೂರು,ಬಿಜೆಪಿ ಹಿರಿಯ ಮುಖಂಡ ಹೇಮಂತ್ ಕುಮಾರ್,ನಗರ ಬಿಜೆಪಿ ಅಧ್ಯಕ್ಷ ಲೋಹಿತ್,ಗಣೇಶ್ ಬೈರಾಪುರ,ಮೋಹನ್ ಮಾವನೂರು,ರವಿಕುಮಾರ್,ನಾಗರಾಜ್ ಕ್ಯಾಂಟೀನ್,ನಂಜುಂಡಪ್ಪ,ಬಸವರಾಜ್,ಬಾಲಲೋಚನಾ,ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.
ಫೋಟೋ ಕ್ಯಾಫ್ಶನ್ಸ್ : ದೇಶದ ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆಗಳ ಪೈಕಿ ಮೂರು ರಾಜ್ಯಗಳ ಅಭೂತಪೂರ್ವ ಗೆಲುವಿಗೆ ಆಲೂರು ಪಟ್ಟಣದಲ್ಲಿ ಬಿಜೆಪಿ ಶಾಸಕ ಸಿಮೆಂಟ್ ಮಂಜು ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಿದರು.