Election Results Live | ಜಮ್ಮು-ಕಾಶ್ಮೀರದಲ್ಲಿ ಮಾಜಿ ಸಿಎಂಗಳಿಗೆ ಸೋಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಜಮ್ಮು ಮತ್ತು ಕಾಶ್ಮೀರದಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ಲೋಕಸಭಾ ಚುನಾವಣೆ(Lok Sabha Election 2024) ಇದಾಗಿದ್ದು, ಕಣದಲ್ಲಿದ್ದ ಇಬ್ಬರು ಮಾಜಿ ಮುಖ್ಯಮಂತ್ರಿಗಳು(EX CMs) ಸೋಲುಂಡಿದ್ದಾರೆ.

ಮಾಜಿ ಮುಖ್ಯಮಂತ್ರಿಗಳಾದ ಓಮರ್‌ ಅಬುಲ್ಲಾ ಮತ್ತು ಮೆಹಬೂಬಾ ಮುಫ್ತಿ ಹೀನಾಯ ಸೋಲುಂಡಿದ್ದಾರೆ.

ಬಾರಾಮುಲ್ಲಾ ಕ್ಷೇತ್ರದಲ್ಲಿ ಐದು ಹಂತಗಳ ಮತ ಎಣಿಕೆ ಪೂರ್ಣಗೊಂಡಿದ್ದು, ಎನ್‌ಸಿ ಪಕ್ಷ ಉಪಾಧ್ಯಕ್ಷ ಓಮರ್‌ ಅಬ್ದುಲ್ಲಾ 46000 ಮತಗಳ ಹಿನ್ನಡೆ ಅನುಭವಿಸಿದ್ದಾರೆ.

ಇನ್ನಿ ಓಮರ್‌ ಅಬ್ದುಲ್ಲಾ ಅವರ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಮಾಜಿ ಶಾಸಕ ಎಂಜಿನಿಯರ್‌ ಅಬ್ದುಲ್‌ ರಶೀದ್‌ ತಿಹಾರ್‌ ಜೈಲಿನಿಂದಲೇ ಕಣಕ್ಕಿಳಿದಿದ್ದರು. ಅವರ ಪರವಾಗಿ ಅವರ ಪುತ್ರ ಅಬ್ರಾರ್‌ ರಶೀದ್‌ ಪ್ರಚಾರ ನಡೆಸಿದ್ದರು. ಇನ್ನು ರಶೀದ್‌ 1,40,073, ಓಮರ್‌ ಅಬ್ದುಲ್ಲಾ 78,458 ಹಾಗೂ ಪೀಪಲ್‌ ಕಾನ್ಫರೆನ್ಸ್‌ ಅಧ್ಯಕ್ಷ ಸಜ್ಜದ್‌ ಲೋನೆ 55,906 ಮತ ಗಳಿಸಿದ್ದಾರೆ.

ಇನ್ನು ರಜೌರಿ-ಅನಂತಕುಮಾರ್‌ ಕ್ಷೇತ್ರದಲ್ಲಿ ಮೆಹಬೂಬಾ ಮುಫ್ತಿ 1,60,000 ಮತಗಳ ಸೋಲುಂಡಿದ್ದಾರೆ. ರಜೌರಿ-ಅನಂತಕುಮಾರ್‌ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದ ಪೀಪಲ್ಸ್‌ ಡೆಮಾಕ್ರಟಿಕ್‌ ಪಕ್ಷದ ಅಧ್ಯಕ್ಷೆ ಮೆಹಬೂಬಾ ಮುಫ್ತಿ 1,59,266 ಮತಗಳನ್ನು ಪಡೆದು ಸೋಲುಂಡಿದ್ದಾರೆ. ಅವರ ವಿರುದ್ಧ ಕಣಕ್ಕಿಳಿದಿದ್ದ ಎನ್‌ಸಿ ಅಭ್ಯರ್ಥಿ ಮಿಯಾನ್‌ ಅಲ್ತಾಫ್‌ 2,92,181 ಪಡೆಯುವ ಮೂಲಕ ಗೆಲವು ಸಾಧಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!