ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲಂಗಾಣದಲ್ಲಿಂದು ಮತದಾನ ಆರಂಭವಾಗಿದ್ದು, ಈ ಬಾರಿ ದಾಖಲೆಯ ಮತದಾನ ಮಾಡಿ ಎಂದು ಪ್ರಧಾನಿ ಮೋದಿ ತೆಲಂಗಾಣ ಜನತೆಗೆ ಕರೆ ನೀಡಿದ್ದಾರೆ.
ಪ್ರಧಾನಿ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಭಾರತ ರಾಷ್ಟ್ರ ಸಮಿತಿ ಮುಖ್ಯಸ್ಥ ಕೆ. ಚಂದ್ರಶೇಖರ್ ರಾವ್ ಸೇರಿದಂತೆ ಹಲವು ಪ್ರಭಾವಿ ನಾಯಕರು ಇಲ್ಲಿ ಭರ್ಜರಿ ಪ್ರಚಾರ ನಡೆಸಿದ್ದರು.
ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಆರಂಭವಾಗಿದೆ. ಪ್ರತಿಯೊಬ್ಬರೂ ಮನೆಯಿಂದ ಹೊರಬಂದು ವೋಟ್ ಮಾಡಬೇಕು, ಮತದಾನ ನಮ್ಮ ಹಕ್ಕು, ಹಕ್ಕು ಚಲಾಯಿಸುವುದನ್ನು ಮರೆಯಬೇಡಿ, ಈ ಬಾರಿ ದಾಖಲೆಯ ಮತದಾನ ಮಾಡಿ ಎಂದು ಪ್ರಧಾನಿ ಹೇಳಿದ್ದಾರೆ.
ಸಂಜೆವರೆಗೂ ಮತದಾನಕ್ಕೆ ಅವಕಾಶವಿದ್ದು, 119 ಕ್ಷೇತ್ರಗಳಲ್ಲಿರುವ 32.6 ದಶಲಕ್ಷ ಮತದಾರರು2,290 ಅಭ್ಯರ್ಥಿಗಳ ಭವಿಷ್ಯವನ್ನು ಇಂದು ನಿರ್ಧರಿಸಲಿದ್ದಾರೆ.
ಈಗಾಗಲೇ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ, ಮಿಜೋರಾಂಗಳಲ್ಲಿ ಮತದಾನ ಮುಕ್ತಾಯವಾಗಿದೆ. ತೆಲಂಗಾಣದಲ್ಲಿ ಇಂದು ಮತದಾನ ನಡೆಯಲಿದೆ. ಡಿಸೆಂಬರ್ 3ರಂದು ಮತದಾನದ ಫಲಿತಾಂಶ ಹೊರಬೀಳಲಿದೆ.
ಹೇಗಿದೆ ತಯಾರಿ?
ಇಂದು 106 ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಗ್ಗೆ 7 ರಿಂದ ಸಂಜೆ 5ರವರೆಗೆ ಚುನಾವಣೆ ನಡೆಯಲಿದೆ. ಸಕ್ಸಲ್ ಉಪಟಳ ಇರುವ 13 ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಗ್ಗೆ 7 ರಿಂದ 4 ಗಂಟೆವರೆಗೆ ಮತದಾನ ನಡೆಯಲಿದೆ. ಒಟ್ಟಾರೆ 2.5 ಲಕ್ಷ ಸಿಬ್ಬಂದಿಯನ್ನು ಆಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆ ಆಗದಂತೆ ಎಲ್ಲ ಮುಂಜಾಗ್ರತಾ ಕ್ರಮಗಳನ್ನಯ ಕೈಗೊಳ್ಳಲಾಗಿದೆ.