ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿನ್ನೆಯಷ್ಟೇ ತಮಿಳಿನ ಸೂಪರ್‌ಸ್ಟಾರ್ ಸೂರ್ಯ ತಮ್ಮ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ.
ನಟ ಸೂರ್ಯನ ಜನ್ಮದಿನದ ಪ್ರಯುಕ್ತ ಬ್ಯಾನರ್ ಅಂಟಿಸುತ್ತಿದ್ದ ಇಬ್ಬರು ಅಭಿಮಾನಿಗಳು ಕರೆಂಟ್ ಹೊಡೆದು ಮೃತಪಟ್ಟಿದ್ದಾರೆ.
ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯಲ್ಲಿ ನರಸರಾವ್‌ಪೇಟೆ ಮಂಡಲದ ನಕ್ಕಾ ವೆಂಕಟೇಶ್ ಹಾಗೂ ಪೂಲೂರಿ ಸಾಯಿ ಮೃತರು. ಕಬ್ಬಿಣದ ರಾಡ್ ತಂತಿಗೆ ತಗುಲಿ ಶಾಕ್ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇವರಿಬ್ಬರು ವಿದ್ಯಾರ್ಥಿಗಳಾಗಿದ್ದಾರೆ.