ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಸರ್ಕಾರದ ಗೃಹಜ್ಯೋತಿ ಯೋಜನೆ ಬಗೆಗಿನ ಮಾರ್ಗಸೂಚಿಯೊಂದನ್ನು ನಿನ್ನೆ ಸರ್ಕಾರ ಬಿಡುಗಡೆ ಮಾಡಿದ್ದು, ಬಾಡಿಗೆದಾರರಿಗೆ ಕರೆಂಟ್ ಫ್ರೀಯಾಗಿ ಸಿಗಲಿದ್ಯೋ ಇಲ್ಲವೋ ಎನ್ನುವ ವಿಚಾರಕ್ಕೆ ಭಾರೀ ಗೊಂದಲವಾಗಿತ್ತು.
ಆದರೆ ಇದೀಗ ಈ ವಿಷಯದಲ್ಲಿ ಸ್ಪಷ್ಟನೆ ಸಿಕ್ಕಿದ್ದು, ಬಾಡಿಗೆ ಮನೆಯವರಿಗೂ ೨೦೦ ಯುನಿಟ್ ವಿದ್ಯುತ್ ಫ್ರೀ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಒಂದಕ್ಕಿಂತ ಹೆಚ್ಚು ವಿದ್ಯುತ್ ಸಂಪರ್ಕ ಹೊಂದಿದ್ದರೆ ಒಬ್ಬರಿಗೆ ಮಾತ್ರ ಕರೆಂಟ್ ಫ್ರೀ ಎನ್ನಲಾಗಿತ್ತು.
ಆದರೆ ಅಧಿಕಾರಿಗಳೊಂದಿಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ಮಾತನಾಡಿದ್ದು, ಪ್ರತಿ ವಿದ್ಯುತ್ ಸಂಪರ್ಕಕ್ಕೆ ಪ್ರತ್ಯೇಕ ಮೀಟರ್ ಹೊಂದಿರುವ ವಿಶಿಷ್ಟ ಗುರುತಿನ ಸಂಖ್ಯೆಯಾದ ಆರ್‌ಆರ್ ಸಂಖ್ಯೆಯನ್ನು ಇಲ್ಲಿ ಪರಿಗಣಿಸಲಾಗುವುದು. ಕಂದಾಯ ನೋಂದಣಿ ಸಂಖ್ಯೆಯ ಅನುಸಾರ ಭೂಮಾಲಿಕರು ಅಥವಾ ಬಾಡಿಗೆದಾರರು ಯಾರೇ ಇರಲಿ, ವಿಶಿಷ್ಟವಾದ ಆರ್‌ಆರ್ ಸಂಖ್ಯೆ ಇದ್ದರೆ ಅವರು ಗೃಹಜ್ಯೋತಿ ಯೋಜನೆಗೆ ಅರ್ಹರಾಗಿರುತ್ತಾರೆ.