ಹೊಸದಿಗಂತ ವರದಿ ಜೋಯಿಡಾ:
ಜೋಯಿಡಾ ತಾಲೂಕಿನ ಕುಳಗಿ ಸಂರಕ್ಷಿತಾರಣ್ಯದಲ್ಲಿ ವಿದ್ಯುತ್ ತಂತಿ ತಗುಲಿ ಆನೆಯೊಂದು ಮೃತಪಟ್ಟಿದೆ.
ಸುಮಾರು 15 ವರ್ಷದ ಹೆಣ್ಣಾನೆ ಇದಾಗಿದ್ದು ಸಾಗವಾನಿ ಗಿಡಕ್ಕೆ ಮೈ ತಿಕ್ಕಿ ಕೊಳ್ಳುತ್ತಿರುವಾಗ ಗಿಡ ಬಗ್ಗಿ ಮುಖ್ಯ ವಿದ್ಯುತ್ ಲೈನ್ ಗೆ ತಗುಲಿ ಆನೆ ಮೃತ ಪಟ್ಟಿದೆ.
ಕಾಳಿ ಹುಲಿ ಸಂರಕ್ಷಿತಾರಣ್ಯದ ನಿರ್ದೇಶಕ ನಿಲೇಶ್ ಶಿಂದೆ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ ಎಸ್ ಕಳ್ಳಿಮಠ್ ಮಾರ್ಗದರ್ಶನ ದಲ್ಲಿ ಮುಂದಿನ ಕ್ರಮ ಕೈಕೊಂಡಿರುತ್ತಾರೆ.