ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್‌ನ ಸಿಇಒ ಮತ್ತು ಟ್ವಿಟರ್‌ನ ಮಾಲೀಕ ಎಲಾನ್ ಮಸ್ಕ್ ಅವರು “ಬ್ರಹ್ಮಾಂಡದ ನಿಜವಾದ ಸ್ವರೂಪವನ್ನು ಅರ್ಥಮಾಡಿಕೊಳ್ಳುವ” ಗುರಿಯೊಂದಿಗೆ ಹೊಸ ಕೃತಕ ಬುದ್ಧಿಮತ್ತೆ ಸಂಸ್ಥೆ (AI) xAI ಅನ್ನು ಆರಂಭಿಸುವುದಾಗಿ ಘೋಷಣೆ ಮಾಡಿದ್ದಾರೆ.
ಆಲ್ಫಾಬೆಟ್ ಒಡೆತನದ ಗೂಗಲ್‌ನಿಂದ ಮೈಕ್ರೋಸಾಫ್ಟ್ ಮತ್ತು ಓಪನ್‌ಎಐ ಕಂಪನಿಗಳಲ್ಲಿ ಕೆಲಸ ಮಾಡಿದ ಎಂಜಿನಿಯರ್‌ಗಳಿಂದ ಕೂಡಿದ ತಂಡವನ್ನು ಈ ಸಂಸ್ಥೆ ಒಳಗೊಂಡಿರಲಿದೆ ಎಂದು ಮಸ್ಕ್ ತಿಳಿಸಿದ್ದಾರೆ.
ಎಲಾನ್ ಮಸ್ಕ್ ಸ್ವತಃ ಅವರೇ ಈ ಸ್ಟಾರ್ಟ್‌ಅಪ್ ಅನ್ನು ಮುನ್ನಡೆಸಲಿದ್ದಾರೆ. ಈ ಹಿಂದೆ ಮಸ್ಕ್ ಹಲವು ಸಂದರ್ಭಗಳಲ್ಲಿ ಕೃತಕ ಬುದ್ಧಿಮತ್ತೆಯ ಅಭಿವೃದ್ಧಿಯನ್ನು ನಿಲ್ಲಿಸಬೇಕು ಎಂದಿದ್ದರು. ಆದರೆ ಈಗ
‘ವಾಸ್ತವತೆಯ ಅರಿವಿಗೆ ಈ ಸಂಸ್ಥೆಯನ್ನು ಘೋಷಿಸಲಾಗಿದೆ’ ಎಂದು ಮಸ್ಕ್ ಟ್ವೀಟ್ ಮಾಡಿದ್ದಾರೆ.
ಈ ಸಂಸ್ಥೆಯಲ್ಲಿ ಮಸ್ಕ್ ಅವರೇ ಏಕೈಕ ನಿರ್ದೇಶಕರಾಗಿರಲಿದ್ದು, ಕಛೇರಿಯ ವ್ಯವಸ್ಥಾಪಕ ನಿರ್ದೇಶಕರಾದ ಜೇರೆಡ್ ಬಿರ್ಚಾಲ್ ಅವರು ಕಾರ್ಯನಿರ್ವಹಿಸಲಿದ್ದಾರೆ.