‘ಅಮೆರಿಕ ಪಾರ್ಟಿ’ ಘೋಷಿಸಿದ ಎಲಾನ್ ಮಸ್ಕ್ : ದೊಡ್ಡಣ್ಣನ ದೇಶದ ರಾಜಕೀಯದಲ್ಲಿ ಹೊಸ ತಿರುವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹತ್ತಿರದ ವ್ಯಕ್ತಿಯಾಗಿದ್ದ ಟೆಕ್ ದೈತ್ಯ ಎಲಾನ್ ಮಸ್ಕ್, ಹೊಸ ರಾಜಕೀಯ ಪಕ್ಷವೊಂದನ್ನು ಘೋಷಿಸಿ ದೇಶದ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಉಂಟುಮಾಡಿದ್ದಾರೆ. ‘ಅಮೆರಿಕ ಪಾರ್ಟಿ’ ಎಂಬ ಹೆಸರಿನ ಈ ಹೊಸ ಪಕ್ಷ, ಮುಂದಿನ ದಿನಗಳಲ್ಲಿ ಅಮೆರಿಕದ ಚುನಾವಣೆಗಳಲ್ಲಿ ಹೊಸ ಆಯಾಮ ನೀಡಲಿದೆ ಎಂದು ಭಾವಿಸಲಾಗಿದೆ.

ಇತ್ತೀಚೆಗಷ್ಟೇ ಅಧ್ಯಕ್ಷ ಟ್ರಂಪ್ ಅವರು ‘ಒನ್ ಬಿಗ್, ಬ್ಯೂಟಿಫುಲ್ ಬಿಲ್’ ಎಂಬ ಮಹತ್ವದ ತೆರಿಗೆ ಹಾಗೂ ಖರ್ಚು ಮಸೂದೆಗೆ ಸಹಿ ಹಾಕಿದ ನಂತರ ಮಸ್ಕ್ ಈ ನಿರ್ಧಾರ ಪ್ರಕಟಿಸಿದ್ದಾರೆ. ಈ ಬಿಲ್ಲು ಜಾರಿಯಾದರೆ ಎಲೆಕ್ಟ್ರಿಕ್ ವಾಹನಗಳ ಸಬ್ಸಿಡಿ ಸೇರಿದಂತೆ ಹಲವು ಆಯ್ದ ಉದ್ಯಮಗಳಿಗೆ ಕಡಿತ ಬರುವ ಸಾಧ್ಯತೆ ಇದೆ ಎಂಬ ಎಚ್ಚರಿಕೆಯನ್ನು ಟ್ರಂಪ್ ನೀಡಿದ್ದರು. ಮಸೂದೆಗೆ ಸಹಿ ಹಾಕಿದ ಮರು ದಿನವೇ ಟೆಕ್ ದೈತ್ಯ ಎಲಾನ್ ಮಸ್ಕ್ ಈ ಹೊಸ ರಾಜಕೀಯ ಪಕ್ಷವನ್ನು ಘೋಷಣೆ ಮಾಡಿದ್ದಾರೆ.

ಇದಕ್ಕೂ ಮೊದಲು 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್‌ಗೆ ಬೆಂಬಲ ವ್ಯಕ್ತಪಡಿಸಿದ್ದ ಎಲಾನ್ ಮಸ್ಕ್, ಈ ಹೊಸ ಬೆಳವಣಿಗೆಯೊಂದಿಗೆ ಅವರನ್ನು ಟೇಕ್ ಆಫ್ ಮಾಡಿದ್ದಾರೆ. ಡಿಒಜಿಇ (Deficit and Outlays Justification Expenditure) ಎಂಬ ಮಸೂದೆಗೆ ಮಸ್ಕ್ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈ ಕುರಿತಂತೆ ಅಮೆರಿಕ ಸಂಸತ್ತಿನಲ್ಲಿ ರಿಪಬ್ಲಿಕನ್ ಸದಸ್ಯರ ವಿರುದ್ಧವೂ ಭಾರೀ ಟೀಕೆ ಮಾಡಿದ್ದರು.

‘ಅಮೆರಿಕ ಪಾರ್ಟಿ’ ಯ ಉದ್ದೇಶ, ದೇಶದ ವ್ಯವಹಾರಿಕ ಬುದ್ಧಿವಂತಿಕೆ ಮತ್ತು ವೈಜ್ಞಾನಿಕ ಸುಧಾರಣೆಯ ಹಿತದೃಷ್ಟಿಯಿಂದ ಹೊಸ ರಾಜಕೀಯ ಚಟುವಟಿಕೆಗೆ ಪ್ರೇರಣೆ ನೀಡುವುದು ಎಂಬುದಾಗಿ ಮಸ್ಕ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!