ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ ಮೇಲೆ ಟೆಸ್ಲಾ ಸಿಇಒ ಮಹತ್ವದ ನಿರ್ಣಯವೊಂದನ್ನು ಮಾಡಿದ್ದಾರೆ.
ಮುಂದಿನ ದಿನಗಳಲ್ಲಿ ಭಾರತದಲ್ಲಿ ಮಸ್ಕ್ ಹೂಡಿಕೆಗೆ ಮುಂದಾಗಿದ್ದು, ಈ ವರ್ಷದ ಅಂತ್ಯದೊಳಗೆ ಭಾರತದಲ್ಲಿ ಟೆಸ್ಕಾ ಕಾರು ಉತ್ಪಾದನಾ ಘಟಕವನ್ನು ಸ್ಥಾಪಿಸುವ ಬಗ್ಗೆ ಆಸಕ್ತಿ ತೋರಿದ್ದಾರೆ.
ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಮಸ್ಕ್ ತನ್ನ ಮುಂದಿನ ಪ್ಲಾನ್ಸ್ ಬಗ್ಗೆ ಮಾತನಾಡಿದ್ದು, ಟೆಸ್ಲಾ ಬೇರೆ ದೇಶಗಳಲ್ಲಿ ಹೂಡಿಕೆ ಮಾಡಲು ಹಿಂಜರಿಯುತ್ತಿತ್ತು. ಆದರೆ ಇದೀಗ ಭಾರತದಲ್ಲಿ ಹೂಡಿಕೆ ಮಾಡಲು ಟೆಸ್ಲಾ ಮುಂದಾಗಿದೆ.
ಮುಂಬರುವ ವರ್ಷದಲ್ಲಿ ಭಾರತಕ್ಕೆ ಭೇಟಿ ನೀಡಿ ಹೂಡಿಕೆಗಳ ಬಗ್ಗೆ ಚರ್ಚೆ ಮಾಡಲು ಇಚ್ಛಿಸುತ್ತೇನೆ ಎಂದು ಮಸ್ಕ್ ಹೇಳಿದ್ದಾರೆ.