ಅಮೆರಿಕದ ಭದ್ರತೆ, ಆರೋಗ್ಯ, ಆರ್ಥಿಕ ಪ್ರಗತಿಗೆ ಒತ್ತು: ಟ್ರಂಪ್ ಘೋಷಣೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊದಲ ಬಾರಿಗೆ ಕಾಂಗ್ರೆಸ್ ಜಂಟಿ ಅಧಿವೇಶನದಲ್ಲಿ ಮಾತನಾಡಿದ್ದು, ಈ ವೇಳೆ ತಮ್ಮ ಎರಡನೇ ಅಧಿಕಾರ ಅವಧಿಯ ಸಂಪೂರ್ಣ ಯೋಜನೆಗಳ ನೋಟವನ್ನು ಪ್ರಸ್ತುತಪಡಿಸಿದ್ದಾರೆ.

ಅಮೆರಿಕದ ಭದ್ರತೆ, ಆರೋಗ್ಯ ಮತ್ತು ಆರ್ಥಿಕ ಪ್ರಗತಿಗೆ ಹೆಚ್ಚಿನ ಒತ್ತು ನೀಡುವುದಾಗಿ ಘೋಷಿಸಿದರು.

ಟ್ರಂಪ್ ಘೋಷಣೆ
ದೇಶೀಯ ಮತ್ತು ವಿದೇಶಾಂಗ ನೀತಿಯಲ್ಲಿ ಬದಲಾವಣೆ
ಕೆಲವು ವಾರಗಳಲ್ಲಿ ಆರ್ಥಿಕತೆಯನ್ನು ಸುಧಾರಿಸುವುದು
ಆರೋಗ್ಯ ವ್ಯವಸ್ಥೆಯ ಮೇಲ್ವಿಚಾರಣೆ ಮಾಡುವುದು
ಅಂತಾರಾಷ್ಟ್ರೀಯ ವ್ಯಾಪಾರ ಸಂಬಂಧಗಳ ಮೇಲೆ ನಿಗಾ
ಅಮೆರಿಕದ ನಾಗರಿಕರ ಜೀವನ ಮಟ್ಟವನ್ನು ಹೆಚ್ಚಿಸುವುದು
ಅಮೆರಿಕದ ಜಾಗತಿಕ ನಾಯಕತ್ವದ ಪಾತ್ರ ಬಲಪಡಿಸುವುದು

ಈ ಕುರಿತು ಟ್ರಂಪ್ ತಮ್ಮ ನೀತಿಗಳನ್ನು ಬೆಂಬಲಿಸುವಂತೆ ಅಧಿವೇಶದನ ಸಭೆಗೆ ಟ್ರಂಪ್ ಮನವಿ ಮಾಡಿಕೊಂಡರು. ಅಮೆರಿಕವನ್ನು ಬಲಿಷ್ಠ ಮತ್ತು ಸಮೃದ್ಧ ದೇಶವನ್ನಾಗಿ ಮಾಡಲು ಸಹಾಯ ಮಾಡಬೇಕು. ಒಗ್ಗಟ್ಟಾಗಿ ದೇಶದ ಹಿತಾಸಕ್ತಿಗಾಗಿ ಕೆಲಸ ಮಾಡೋಣ. ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯವನ್ನು ರೂಪಿಸಲು ಇದೇ ಒಳ್ಳೆಯ ಸಮಯ ಎಂದು ಹೇಳಿದರು.

ಇನ್ಮುಂದೆ ಅಮೆರಿಕದಲ್ಲಿ ಗಂಡು ಮತ್ತು ಹೆಣ್ಣು ಎಂಬ ಎರಡು ಲಿಂಗಗಳು (Only 2 Genders – Male And Female) ಮಾತ್ರ ಇರುತ್ತವೆ. ಮಹಿಳಾ ಕ್ರೀಡೆಗಳಲ್ಲಿ ಪುರುಷರು ಭಾಗವಹಿಸುವುದು ನಿಷೇಧ ಎಂದು ಹೇಳಿದ್ದಾರೆ.

ಅದೇ ರೀತಿ ವಾಕ್ ಸ್ವಾತಂತ್ರ್ಯಕ್ಕೆ ಉತ್ತೇಜನ ಮತ್ತು ಅಮೆರಿಕದ ಏಕೈಕ ಅಧಿಕೃತ ಭಾಷೆ ಇಂಗ್ಲಿಷ್ ಅಗಲಿದ್ದು, ಮೆಕ್ಸಿಕೋ ಕೊಲ್ಲಿ ಇನ್ಮುಂದೆ ಅಮೆರಿಕದ ಕೊಲ್ಲಿಯಾಗಿ ಮರುನಾಮಕರಣ ಮಾಡಲಾಗುವುದು ಎಂದಿದ್ದಾರೆ.

ಅದೇ ರೀತಿ ಟ್ರಂಪ್ ದೇಶಕ್ಕೆ ಪ್ರಯೋಜನಕಾರಿಯಲ್ಲದ ಬೈಡೆನ್ ನೀತಿಗಳು ರದ್ದು ಮಾಡಿದ್ದು, ಹಿಂದಿನ 4 ವರ್ಷಗಳಲ್ಲಿ ಮಾಡಲು ಸಾಧ್ಯವಾಗದ್ದನ್ನು ತಮ್ಮ ಸರ್ಕಾರ 43 ದಿನದಲ್ಲಿ ಮಾಡಿದೆ ಎಂದು ತಿಳಿಸಿದೆ.

ಇದೇ ವೇಳೆ ಏಪ್ರಿಲ್ 2 ರಿಂದ ಭಾರತ ಮತ್ತು ಚೀನಾ ವಿರುದ್ಧ ಪರಸ್ಪರ ಸುಂಕ (Reciprocal tariffs ) ವಿಧಿಸುವುದಾಗಿ ಟ್ರಂಪ್ ಘೋಷಿಸಿದ್ದಾರೆ. ಇದಕ್ಕೂ ಮೊದಲು ಕೆನಡಾ ಮತ್ತು ಮೆಕ್ಸಿಕೊ ಮೇಲೆ ಅಮೆರಿಕ ಈ ಸುಂಕ ವಿಧಿಸಿತ್ತು. ಕೆನಡಾ, ಮೆಕ್ಸಿಕೊ, ಭಾರತ ಮತ್ತು ದಕ್ಷಿಣ ಕೊರಿಯಾಗಳು ನಮ್ಮ ಮೇಲೆ ಬಹಳಷ್ಟು ಸುಂಕಗಳನ್ನು ವಿಧಿಸುತ್ತವೆ ಎಂದು ಟ್ರಂಪ್ ಆರೋಪಿಸಿದ್ದರು.

ಏಪ್ರಿಲ್ 2 ರಿಂದ ಕೆನಡಾ, ಮೆಕ್ಸಿಕೊ, ಚೀನಾ ಮತ್ತು ಭಾರತದ ಮೇಲೆ ಪರಸ್ಪರ ತೆರಿಗೆ ವಿಧಿಸುತ್ತೇವೆ. ನಮ್ಮ ಮೇಲೆ ತೆರಿಗೆ ವಿಧಿಸುವವರ ಮೇಲೆ, ನಾವು ಸಹ ಅಷ್ಟೇ ಪ್ರಮಾಣದ ತೆರಿಗೆಯನ್ನು ವಿಧಿಸುತ್ತೇವೆ ಎಂದು ಟ್ರಂಪ್ ಘೋಷಣೆ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!