VIRAL | ಟಾಯ್ಲೆಟ್‌ ಟಿಶ್ಯೂ ಪೇಪರ್‌ನ್ನೇ ರೆಸಿಗ್ನೇಷನ್‌ ಲೆಟರ್‌ ಮಾಡಿಕೊಂಡ ಉದ್ಯೋಗಿ, ಕಾರಣ ಇದೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕಂಪನಿ ಎಂಪ್ಲಾಯಿಯನ್ನು ಹೇಗೆ ದುಡಿಸಿಕೊಳ್ಳುತ್ತದೋ ಎಂಪ್ಲಾಯಿ ಕೂಡ ಕಂಪನಿಯನ್ನು ಅದೇ ಭಾವನೆಯಿಂದ ಕಾಣುತ್ತಾನೆ. ಕಂಪನಿ ತನಗೆ ಪ್ರೀತಿಯಿಂದ ನೋಡಿಕೊಂಡರೆ ಸ್ವಲ್ಪ ಸಂಬಳ ಕಮ್ಮಿಯಾದ್ರೂ ಉದ್ಯೋಗಿ ಲಾಯಲ್‌ ಆಗಿ ಇರುತ್ತಾರೆ.

ಅದೇ ಸಂಬಳವೂ ಕಡಿಮೆ, ಗೌರರವೂ ಇಲ್ಲ ಎಂದರೆ ಯಾವ ಉದ್ಯೋಗಿಯೂ ಇರೋದಿಲ್ಲ. ಇದಕ್ಕೆ ಉದಾಹರಣೆಯಂತೆ ಇಲ್ಲೊಬ್ಬ ಉದ್ಯೋಗಿ ತನ್ನ ರೆಸಿಗ್ನೇಷನ್‌ ಲೆಟರ್‌ನ್ನು ಟಾಯ್ಲೆಟ್‌ ಟಿಶ್ಯೂ ಪೇಪರ್‌ ಮೇಲೆ ಬರೆದು ಹೋಗಿದ್ದಾರೆ.

ಸಿಂಗಾಪೂರದ ಮಹಿಳಾ ಉದ್ಯೋಗಿಯೊಬ್ಬರು ಟಾಯ್ಲೆಟ್ ಪೇಪರ್ ಮೇಲೆ ತಮ್ಮ ರಾಜೀನಾಮೆ ಬರೆದು ಉದ್ಯೋಗವನ್ನು ತೊರೆದಿದ್ದಾರೆ. ಈ ರಾಜೀನಾಮೆ ಪತ್ರವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಬಳಕೆದಾರರು ತರಹೇವಾರಿ ಕಾಮೆಂಟ್‌ಗಳನ್ನು ಮಾಡಿದ್ದಾರೆ.

ಟಾಯ್ಲೆಟ್ ಪೇಪರ್ ಮೇಲೆ ರಾಜೀನಾಮೆ ಪತ್ರ ಬರೆದು ಉದ್ಯೋಗ ತೊರೆದ ಮಹಿಳೆಈ ರೀತಿ ಪೇಪರ್‌ನಲ್ಲಿ ಯಾಕೆ ರೆಸಿಗ್ನೇಷನ್‌ ಲೆಟರ್‌ ಬರೆದಿದ್ದೀನಿ ಎಂದರೆ ಈ ಕಂಪನಿ ನನ್ನನ್ನು ಈ ಪೇಪರ್‌ನಂತೆಯೇ ನೋಡಿಕೊಂಡಿದೆ ಎಂದು ಸಿಟ್ಟಿನಲ್ಲಿ ಬರೆದಿಟ್ಟು ಹೋಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!