February 4, 2026
Wednesday, February 4, 2026
spot_img

ಉಧಂಪುರದಲ್ಲಿ ಎನ್‌ಕೌಂಟರ್‌: ಗುಹೆಯಲ್ಲಿ ಅಡಗಿ ಕುಳಿತಿದ್ದ ಇಬ್ಬರು ಉಗ್ರರ ಹತ್ಯೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯ ಬಸಂತ್‌ಗಢದ ಗುಹೆಯಲ್ಲಿ ಅಡಗಿದ್ದ ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿದ್ದಾರೆ.

ಹತರಾದ ಉಗ್ರರಿಂದ ಒಂದು M4 ಕಾರ್ಬೈನ್ ಮತ್ತು ಒಂದು AK-47 ರೈಫಲ್ ವಶಕ್ಕೆ ಪಡೆದುಕೊಳ್ಳಲಾಗಿದೆ.

ಸೇನೆ, ಪೊಲೀಸ್ ಮತ್ತು ಸಿಆರ್‌ಪಿಎಫ್ ಜಂಟಿ ತಂಡಗಳೊಂದಿಗೆ ನಡೆದ ತೀವ್ರ ಗುಂಡಿನ ಚಕಮಕಿಯ ನಂತರ, ಮಂಗಳವಾರ ಮಧ್ಯಾಹ್ನದಿಂದ ಭಯೋತ್ಪಾದಕರು ರಾಮನಗರದ ಜಾಫರ್ ಅರಣ್ಯ ಪ್ರದೇಶದಲ್ಲಿ ಅಡಗಿಕೊಂಡಿದ್ದರು. ಆರಂಭಿಕ ಎನ್‌ಕೌಂಟರ್‌ನಲ್ಲಿ ಒಬ್ಬ ಭಯೋತ್ಪಾದಕ ಗಾಯಗೊಂಡಿದ್ದು, ಇಬ್ಬರೂ ಗುಹೆಯೊಳಗೆ ಆಶ್ರಯ ಪಡೆದಿದ್ದರು.ಮಂಗಳವಾರ ಸಂಜೆ ಉಗ್ರಗಾಮಿಗಳು ಕತ್ತಲೆಯ ಮರೆಯಲ್ಲಿ ಪರಾರಿಯಾಗಲು ಯತ್ನಿಸಿದಾಗ ಮತ್ತೆ ಗುಂಡಿನ ಚಕಮಕಿ ಮತ್ತು ಸ್ಫೋಟಗಳು ಸಂಭವಿಸಿದವು. ಕಾರ್ಯಾಚರಣೆ ಮುಂದುವರಿಸಿದ ಭದ್ರತಾ ಪಡೆಗಳು ಉಗ್ರರರನ್ನು ಎನ್‌ಕೌಂಟರ್‌ ಮಾಡಿವೆ.

ಕಳೆದ ಕೆಲವು ದಿನಗಳಿಂದ ಈ ಪ್ರದೇಶದಲ್ಲಿ ಹಲವು ಎನ್‌ಕೌಂಟರ್‌ಗಳು ನಡೆದಿವೆ.

2025ರ ನವೆಂಬರ್‌ನಲ್ಲಿ ಕಿಶ್ತ್ವಾರ್‌ನ ಛಾತ್ರುವಿನಲ್ಲಿ ಭಯೋತ್ಪಾದಕರ ಇರುವಿಕೆ ಬಗ್ಗೆ ನಿರ್ದಿಷ್ಟ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಜಮ್ಮು-ಕಾಶ್ಮೀರ ಪೊಲೀಸರು ಭಾರತೀಯ ಸೇನೆಯ ಸಹಾಯದಿಂದ ಜಂಟಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನಂತರ ಭಯೋತ್ಪಾದಕರು ಮತ್ತು ಭದ್ರತಾ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆಯಿತು.

ಭಯೋತ್ಪಾದನಾ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಕರಣವೊಂದರ ತನಿಖೆಯನ್ನು ತೀವ್ರಗೊಳಿಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (NIA), ಸೋಮವಾರ ಜಮ್ಮು ಮತ್ತು ಕಾಶ್ಮೀರದ ವಿವಿಧ ಜಿಲ್ಲೆಗಳ ಹಲವು ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿತ್ತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !