ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಯನ್ನು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಖಂಡಿಸಿದ್ದಾರೆ. ಕೊಲೆಗಡುಕರು, ಅತ್ಯಾಚಾರಿಗಳನ್ನು ಎನ್‌ಕೌಂಟರ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಯತ್ನಾಳ್, ಬ್ಯಾಂಕ್ ದರೋಡೆಕೋರರು, ಅತ್ಯಾಚಾರಿಗಳು, ಕೊಲೆಗಡುಕರು ಸಿಕ್ಕರೆ ಯಾವುದೇ ಮುಲಾಜಿಲ್ಲದೇ ಎನೌಕೌಂಟರ್ ಮಾಡಿ ಪ್ರಕರಣ ಮುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಗೃಹ ಇಲಾಖೆ ಬದುಕಿದೆಯೋ, ಸತ್ತಿದೆಯೋ ಎಂದು ಜನರೇ ಹೇಳಬೇಕು. ಬ್ಯಾಂಕ್ ದರೋಡೆಕೋರರಿಗೆ, ಅತ್ಯಾಚಾರಿಗಳಿಗೆ, ಕೊಲೆಗಡುಕರು ಸಿಕ್ಕರೆ ಅವರಿಗೆ ಯಾವುದೇ ಮುಲಾಜು ತೋರದೆ ಅಲ್ಲೇ ಎನ್ಕೌಂಟರ್ ಮಾಡಿ ಪ್ರಕರಣವನ್ನು ಮುಗಿಸಬೇಕೇ ಹೊರತು ಅವರಿಗೆ ಯಾವುದೇ ಕನಿಕರ, ಕಾನೂನು ನೆರವು ನೀಡಬಾರದು ಎಂದಿದ್ದಾರೆ.