ಹೊಸದಿಗಂತ ಡಿಜಿಟಲ್ ಡೆಸ್ಕ್:
ಛತ್ತೀಸ್‌ಗಢದ ಸುಕ್ಮಾದ ತುಮಲ್‌ಪಾಡ್ ಗ್ರಾಮದ ಬಳಿ ಭದ್ರತಾ ಪಡೆಗಳು ಇಬ್ಬರು ಮಹಿಳಾ ಮಾವೋವಾದಿಗಳು ಸೇರಿ ಮೂವರನ್ನು ಹೊಡೆದು ಉರುಳಿಸಿವೆ. ಈ ಮೂವರಿಗೆ ತಲಾ 5 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು ಎಂದು ಭಾನುವಾರ ಐಜಿ ಬಸ್ತಾರ್ ಪಿ. ಸುಂದರರಾಜ್ ತಿಳಿಸಿದ್ದಾರೆ.
ಸುಕ್ಮಾ ಪೊಲೀಸರು ಕೂಡ ಈ ಮಾಹಿತಿಯನ್ನು ದೃಢಪಡಿಸಿದ್ದು, ಮೃತರಲ್ಲಿ ಮಿಲಿಟಿಯಾ ಕಮಾಂಡರ್ ಮತ್ತು ಸ್ನೈಪರ್ ತಜ್ಞ ಮದ್ವಿ ದೇವಾ ಸೇರಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ತುಮಲ್‌ಪಾಡ್ ಗ್ರಾಮದ ಬಳಿ ಭದ್ರತಾ ಪಡೆಗಳು ನಡೆಸಿದ ಎನ್ ಕೌಂಟರ್ ನಲ್ಲಿ ಇಬ್ಬರು ಮಹಿಳಾ ಮಾವೋವಾದಿಗಳಾದ ಪೊಡ್ಯಂ ಗಂಗಿ ಮತ್ತು ಸೋಡಿ ಗಂಗಿ ಕೂಡ ಸೇರಿದ್ದಾರೆ.
ಮಾವೋವಾದಿಗಳ ಎನ್ ಕೌಂಟರ್ ಬಳಿಕ ಜಿಲ್ಲಾ ಮೀಸಲು ಗಾರ್ಡ್‌ನ ತಂಡಗಳು 303 ರೈಫಲ್, ಬಿಜಿಎಲ್ ಲಾಂಚರ್ ಮತ್ತು ಮದ್ದುಗುಂಡುಗಳನ್ನು ವಶಕ್ಕೆ ಪಡೆದಿವೆ. ಘಟನೆ ಬಳಿಕ ಈ ಭಾಗದಲ್ಲಿ ತೀವ್ರ ಶೋಧ ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

