ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನಲ್ಲಿ ಇಂದಿನಿಂದ ಒತ್ತುವರಿ ತೆರವು ಕಾರ್ಯ ಮತ್ತೆ ಆರಂಭವಾಗಿದ್ದು, ಇಂದು ಎಲ್ಲೆಡೆ ಬುಲ್ಡೋಜರ್ಗಳ ಸದ್ದು ಕೇಳುತ್ತಿದೆ.
ಬೆಂಗಳೂರಿನ ಎಂಟು ವಲಯಗಳಲ್ಲಿ ಜೆಸಿಬಿ ಮೂಲಕ ಅಕ್ರಮ ಒತ್ತುವರಿ ಕಾರ್ಯಕ್ಕೆ ಮುಂದಾಗಿದ್ದು, ನಾಗರಿಕರು ವ್ಯಾಪಕ ಆಕ್ರೋಶ ಹೊರಹಾಕಿದ್ದಾರೆ.
ಒತ್ತುವರಿ ತೆರವು ಸಂಬಂಧ ಬೆಂಗಳೂರು ಉತ್ತರ ತಹಶೀಲ್ದಾರ್ ನೊಟೀಸ್ಗೆ ನಿವಾಸಿಗಳು ಕೋರ್ಟ್ನಿಂದ ತಡೆ ತಂದಿದ್ದಾರೆ. ಆದರೆ ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ಇದನ್ನು ತಂದಿರಲಿಲ್ಲ. ಸದ್ಯಕ್ಕೆ ಕಾರ್ಯಾಚರಣೆಗೆ ತಡೆ ಬಿದ್ದಿದ್ದು, ಸೋಮವಾರ ಮತ್ತೆ ತೆರವು ಕಾರ್ಯ ಮುಂದುವರಿಯಲಿದೆ.